ಎಲ್ಲಿ ಶ್ರೀ ತುಲಸಿಯ ವನವು
ಅಲ್ಲಿ ಒಪ್ಪುವರು ಸಿರಿನಾರಾಯಣರು || ಪ ||
ಗಂಗೆ ಯಮುನೆ ಗೋದಾವರಿ ಕಾವೇರಿ
ಕಂಗೊಳಿಸುವ ಮಣಿಕರ್ಣಿಕೆಯು
ತುಂಗಭದ್ರೆ ಕೃಷ್ಣವೇಣಿ ತೀರ್ಥಗಳೆಲ್ಲ
ಮುಂಗಾಡಿಸುವ ಮೂಲ ವೃಕ್ಷದಲಿರುವರು ||
ಸರಸಿಜಭವ ಭವ ಸುರಪ ಪಾವಕ ಚಂ-
ದಿರ ಸೂರ್ಯ ಮೊದಲಾದವರು
ಸಿರಿರಮಣನ ಆಜ್ಞದಿ ಅಗಲದಂತೆ
ತರುಮಧ್ಯದೊಳು ನಿತ್ಯ ನೆಲಿಸಿಪ್ಪರು ||
ಋಗ್ವೇದ ಯಜುರ್ವೇದ ಸಾಮ ಅಥರ್ವಣ
ಅಘಹಳಿಸುವ ವೇದಘೋಷಗಳು
ಅಗ್ರ ಭಾಗದಲ್ಲಿದೆ ಬೆಟ್ಟದೊಡೆಯ ಅಲ್ಲಿ
ಶೀಘ್ರದಿ ಒಲಿವ ಶ್ರೀಪುರಂದರವಿಠಲ ||
***
Elli shri tulasiya vanavu alli oppuvaru siri narayanaru
Gangee yamune godavari kaveri gangolisuva mani karnikeyu
Tungabhadre krsnaveni tirtagalella mungadisuva mula vrksadaliruvaru||1||
Sarasija bhava surapa pavana candira surya modaladavaru
Siri ramanana Ajnyadi agaladande taru madhyadolu nitya nelisipparu||2||
Rgveda yajurveda sama atharvana aghavalisuva veda ghosagalu
Agra bhagadallide pettadodeya alli shigradi oliva shri purandara vittala||3||
***
pallavi
elli shrI tulasiya vanavu alli oppuvaru siri nArAyanaru
caraNam 1
gangEe yamune gOdAvari kAvEri gangolIsuva manI karNikeyu
tungabhadre krSNavENi tIrtagaLella mungADisuva mUla vrkSadaliruvaru
caraNam 2
sarasija bhava surapa pAvana candira sUrya modalAdavaru
siri raManana Ajnyadi agaladande taru madhyadoLu nitya nelisipparu
caraNam 3
rgvEda yajurvEda sAma atharvaNa aghavaLisuva vEda ghOSagaLu
agra bhAgadallide peTTadoDeya alli shIgradi oliva shrI purandara viTTala
***
ಎಲ್ಲಿ ಶ್ರೀ ತುಳಸಿಯ ವನವು |
ಅಲ್ಲೊಪ್ಪುವರು ಸಿರಿ-ನಾರಾಯಣರು ||
ಗಂಗೆ ಯಮುನೆ ಗೋದಾವರಿ ಕಾವೇರಿ |
ಕಂಗೊಳಿಸುವ ಮಣಿಕರ್ಣಿಕೆಯು ||
ತುಂಗಭದ್ರೆ ಕೃಷ್ಣವೇಣಿ ತೀರ್ಥಗಳೆಲ್ಲ |
ಸಂಗಡಿಸುತ ವೃಕ್ಷಮೂಲದಲ್ಲಿರುವುವು ||
ಸರಸಿಜಭವಭವಸುರಪಪಾವಕಚಂ-|
ದಿರಸೂರ್ಯಮೊದಲಾದವರು ||
ಸಿರಿರಮಣನ ಆಜೆÕಯಲಿ ಅಗಲದಂತೆ |
ತರುಮಧ್ಯದೊಳುನಿತ್ಯನೆಲಸಿಪ್ಪರು||
ಋಗ್ವೇದ ಯಜುರ್ವೇದಸಾಮಅಥರ್ವಣ |
ಅಗ್ಗಳಿಸಿದ ವೇದಘೋಷಗಳು ||
ಅಗ್ರಭಾಗದಲಿವೆ ಬೆಟ್ಟದೊಡೆಯನಲ್ಲಿ |
ಶ್ರೀಘ್ರದಿ ಒಲಿವ ಶ್ರೀಪುರಂದರವಿಠಲ||
***
ರಾಗ ಭೂಪಾಳಿ. ಅಟ ತಾಳ (raga tala may differ in audio)