ರಾಗ - : ತಾಳ -
ಜಯಮಂಗಳಂ ನಿತ್ಯ ಶುಭಾಮಂಗಳಂ l
ಮುದ್ದು ಶೇಷಾಚಲವಾಸ ಶ್ರೀನಿವಾಸಗೆ ll ಪ ll
ಕಂದರ್ಪನಯ್ಯಗೆ ಕೋಟಿ ಲಾವಣ್ಯಗೆ l
ಮಂದರಧರ ಮಧುಸೂದನನಿಗೆ l
ಕಂದ ಪ್ರಹ್ಲಾದನ್ನ ಕಾಯಿದ ದೇವಗೆ l
ಸೌಂದರ್ಯ ಮೂರ್ತಿ ಸರ್ವೋತ್ತುಮನಿಗೆ ll 1 ll
ಕರಿರಾಜ ವರದಗೆ ಸರಸಿಜ ಸುನಯನಗೆ l
ಸುರಪತಿಯ ಮದಭಂಗ ಮಾಡಿದವಗೆ l
ಸಿರಿ ಅರಸನಿಗೆ ದೈತ್ಯಾಗಿರಿ ನಿಕರ ಕುಲಿಶಗೆ l
ಕರುಣಸಾಗರ ಶರಣ ಜನಪಾಲಗೆ ll 2 ll
ಅಂಬರೀಷ ಶಾಪ ಪರಿಹರಿಸಿ ಪೊರದವಗೆ l
ಕಂಬುರವಿದ ಕಂಜಧನುಪಾಣಿಗೆ l
ಗೊಂಬಿಯಂದದಿ ಅಜಭವಾದಿಗಳ ಕುಣಿಸುವಗೆ l
ಸ್ಥಂಭ ಸನ್ನಿಹಿತ ಪುರಂದರವಿಠಲಗೆ ll 3 ll
***