ಕಾಖಂಡಕಿ ಶ್ರೀ ಕೃಷ್ಣದಾಸರು
ಅವನೆವೆ ದಾನವನು ನೋಡಿರೋ | ಅವನವೇ ದಾನವನು ಪ
ದಾವನು ಸಾಕುವ ದೇವರ ಮರೆದು | ಅವಿವೇಕತನದಲಿ ಜೀವಿಸುತಿಹಾ ಅ.ಪ
ವಿಷಯದ ಸಂಭ್ರಮದಾ ಸ್ಥಿರಪಟ್ಟಾ | ವಸುಧಿಲಿ ಬಗದಾವಾ | ಆಶನ ವ್ಯಸನದೊಳು ಪಶುವಿನ ಪರಿಯಲಿ | ನಿಶಿದಿನ ಗಳೆವುತ ದೆಶೆಗೆಟ್ಟು ಹೋದಾ 1
ಸಾಧು ಸಂಗಕ ದೂರಾ ಶ್ರವಣದ | ಹಾದಿಗೆಂದಿಗೆ ಬಾರಾ | ಸಾಧಿಸಿ ಕುವಿದ್ಯಾವಾದಾ ಆಟಗಳನು | ಸಾದರ ನೋಡುತಾ ತಾ ದಿನಗಳೆವಾ 2
ಗುರು ಮಹಿಪತಿ ಬೋಧಾ ನಂದನು | ಸಾರಿದನಾ ಹಿತವಾದಾ | ಹರಿನಾಮಾವೆಂದಿಗೆ ಸ್ಮರಿಸು ಮುಖದೊಳು | ನರದೇಹವೆಂಬುದು ಬಾರದು ನೋಡಿ 3
***