Showing posts with label ರಂಗ ಕುಣಿದ ಮುದ್ದು ರಂಗ ಕುಣಿದ prasannavenkata RANGA KUNIDA MUDDU RANGA KUNIDA GOPI KANGALA MUNDE. Show all posts
Showing posts with label ರಂಗ ಕುಣಿದ ಮುದ್ದು ರಂಗ ಕುಣಿದ prasannavenkata RANGA KUNIDA MUDDU RANGA KUNIDA GOPI KANGALA MUNDE. Show all posts

Tuesday, 9 November 2021

ರಂಗ ಕುಣಿದ ಮುದ್ದು ರಂಗ ಕುಣಿದ ankita prasannavenkata RANGA KUNIDA MUDDU RANGA KUNIDA GOPI KANGALA MUNDE

by ಪ್ರಸನ್ನವೆಂಕಟದಾಸರು
ರಂಗ ಕುಣಿದ ಮುದ್ದು ರಂಗ ಕುಣಿದ ಪ.

ರಂಗ ಕುಣಿದ ಗೋಪಿಕಂಗಳ ಮುಂದೆಪೊಂಗೆಜ್ಜೆ ರವದೊಳು ಅಂಗಳದೊಳು 1

ಗೆಳೆಯರೆಂದೆನಿಸುವ ಎಳೆಮಕ್ಕಳೊಡಗೂಡಿಬಳುಕುತ ಬಾಗುತ ನಲಿನಲಿದಾಡಿ 2

ಮೊಳೆವಲ್ಲು ಬಾಯಿಜೊಲ್ಲು ಗಿಳಿಸೊಲ್ಲಿನಿಂದಲಿಕಳಕಳಿಸಿ ನಕ್ಕು ನಗಿಸಿ ಬಿದ್ದೆದ್ದು 3

ಸುಳಿಗುರುಳು ಪಣೆಯಲಿ ಒಲಿದಾಡಲುಬಲರಾಮ ತಿದ್ದಿದರಳುತ ಅಳುಕುತ 4

ಅರಳೆಲೆ ಮಾಗಾಯಿ ಬೆರಳ ರನ್ನುಂಗುರಕಿರುಗೆಜ್ಜೆ ಭಾರೆಂದು ತರಳರಿಗಿತ್ತು 5

ಮಕ್ಕಳ ರತುನ ಶ್ರೀ ಚಿಕ್ಕಕೃಷ್ಣಯ್ಯನುಬೆಕ್ಕಿಗೆ ಬೆದರ್ಯೆವೆ ಇಕ್ಕದೆ ನೋಡಿ 6

ನಗುತತಿ ಮುದ್ದಿಸಿ ಬಿಗಿದಪ್ಪಲೆಶೋದೆಯಮಗ ಪ್ರಸನ್ವೆಂಕಟೇಶ ಚಿಗಿದುಡಿಯಲ್ಲಿ 7
****