Showing posts with label ಬೇಡಬೇಡೆಲಾ ಕೊಡಬೇಡೆಲಾ pranesha vittala. Show all posts
Showing posts with label ಬೇಡಬೇಡೆಲಾ ಕೊಡಬೇಡೆಲಾ pranesha vittala. Show all posts

Thursday, 14 November 2019

ಬೇಡಬೇಡೆಲಾ ಕೊಡಬೇಡೆಲಾ ankita pranesha vittala

by ಪ್ರಾಣೇಶದಾಸರು
ಬೇಡಬೇಡೆಲಾ ಕೊಡಬೇಡೆಲಾ ಸೀರೆಬೇಡಿದರೆ ದೇವರಾಣೆಲಾ ಪ

ಇನ್ನೆರಡು ಗಳಿಗೆಗೆ ನಿನ್ನ ಉಂಬುವ ಹೊತ್ತು |ಅನ್ನದಕಾಂಕ್ಷೆ ಹುಟ್ಟದೇನಲಾ ||ಮನ್ನಿಸಿ ಬೇಡಿದರೆ ಉನ್ನತಾಹಂಕಾರ- |ವನ್ನು ತೋರುವೆ ಇಟ್ಟುಕೊಳ್ಳೆಲಾ 1

ವ್ಯಾಳೆವಾಗಲು ಯಮ್ಮನ್ನಾಳುವವರೇ ಬಹರು |ಹೇಳಿ ನಿನ್ನನೇ ಕೊಲ್ಲಿಸುವೆವೇವಲಾ ||ಖೂಳಪೂತನಿ ಕೊಂದ ಧಾಳಿ ಬಲ್ಲರವರು |ಬಾಲಕನೆನ್ನರು ನಿನ್ನಗೆಲಾ 2

ಬತ್ತಲರಾಗಿ ಜಲ ವ್ಯರ್ಥ ಸೇರಿದಿರೆಂದು |ವತ್ತಿ ನಮ್ಮನು ಕೊಲ್ಲರವರೆಲಾ ||ಹತ್ತೆಂಟು ತಲೆಯಿಂದ ವಸ್ತ್ರರಹಿತ ಸ್ನಾನ |ನಿತ್ಯನಮ್ಮೊಳು ನಡತೆಲಾ 3

ಕರಕರಿಗಾರದೆ ಮೈಮರೆದು ಊರಿಗೆ ಹೋಗಿ |ಭರದಿಂದೆಶೋದೆಗೆ ದೂರೆವೆಲಾ ||ತರುಣಿಯರೆಲ್ಲ ಹಿಂದೆ ಮೊರೆಯಿಡೆ ಲಾಲಿಸಿ |ಒರಳಿಗೆ ಕಟ್ಟಿಸಿದ್ದೆವೆಲಾ 4

ಲಲನೆಯರೆಲ್ಲ ಕೂಡಿ ಜಲಬಿಟ್ಟು ಬಂದರೆ |ಕೊಳುವೆ ನಿನ್ನಯ ಪ್ರಾಣಾ | ತಿಳಿಯಲೊಗಳಿಸಿ ಸಂಸಾರವ ಸಲುಹುತಿಹರು ನಾವೇ |ಕಳವೇನೊ ಪ್ರಾಣೇಶ ವಿಠಲ 5
********