Showing posts with label ತೂಗೀ ಲಾಲನೆ ಲಾಲಿಸಿದೆಯಾ ರಾಮ vyasa vittala. Show all posts
Showing posts with label ತೂಗೀ ಲಾಲನೆ ಲಾಲಿಸಿದೆಯಾ ರಾಮ vyasa vittala. Show all posts

Friday, 27 December 2019

ತೂಗೀ ಲಾಲನೆ ಲಾಲಿಸಿದೆಯಾ ರಾಮ ankita vyasa vittala

ಶ್ರೀ ಕಲ್ಲೂರು ಸುಬ್ಬಣ್ಣಾಚಾರ್ಯರ ಕೃತಿ

ತೂಗೀ ಲಾಲನೆ ಲಾಲಿಸಿದೆಯಾ ರಾಮ | 
ತೊಟ್ಟಿಲೊಳ್ಮಲಗಿಹನಾಗಾರಿ ವಾಹನ ನರಜನ ಪ್ರೇಮಾ | 
ಹರಿ ಸಾರ್ವಭೌಮ || ಪ. ||
ಯೋಗಿ ಮಧ್ವಮತದಾಗಮ ವಂದಿತ 
ಭಾಗವತಾಗ್ರಣಿ ಶ್ರೀಗುರುಗಳ ಕೈ    || ಅ. ಪ. ||

ಪ್ರಳಯ ಕಾಲದಲಿ ಹರಿ ನೀನಂದು | 

ಶ್ರೀ ಭೂ ದುರ್ಗಾತ್ಮಕ ಜಲದಾಲದೆಲೆಯಲಿ ತೊಟ್ಟಿಲಲಂದೂ | 
ಕತ್ತಲೆಯೊಳಗಂದೂ ಎಲ್ಲಾ ಜೀವರ ಪೊಕ್ಕಳ ಎಡ ಬಲ ತಂದೂ | 
ದೀನ ಜನರ ಬಂಧೂ || 
ಥಳ ಥಳ ಪೊಳೆಯುವ ಮಣಿಯ 
ತೊಟ್ಟಿಲೊಳುಲಲನೆ ಸಹಿತ ಎಡ ಬಲ ವೈಭೋಗದ || 1 ||

ಗೋಕುಲದೊಳೊ ಗೋಪಿಯರಿಂದ 

ತೂಗಿಸಿಕೊಂಡು ಸಾಕಾಗಲಿಲ್ಲೇ ಎಲೊ ಮುಕುಂದ | 
ಕೌಸಲ್ಯಾದೇವಿಯು ಬೇಕೆಂದು 
ಮುದ್ದಿಸಿ ಮೋಹದಲಿಂದಾ | ಆದ ಕಾರಣದಿಂದಾ || 
ಏಕ ಮನಸಿನಲಿ ಈ ಪರ ಮುನಿಪಗೆ 
ಬೇಕೆಂದೊಲಿದು ಪರಾಕನು ಕೊಳ್ಳುತ || 2 ||

ಶ್ರುತಿ ಗೀತೆಯಿಂದ ಸುಂದರವಾದ | 

ಅಂಭ್ರಣಿ ಸೂಕ್ತದಲಿ ಸ್ತುತಿಸೀದುದೆಲ್ಲವು ಅತ್ಯಗಾಧಾ | 
ಅದಕಿಂತ ಇವರಲಿ ಅತಿಶಯವೇನೊ ಪೇಳಲಿ ಮೋದ |
 ಸತ್ಯಬೋಧಾರ್ಯರ ||
ಮತಿಗೆ ನೀ ಮರುಳಾದೆ ಮಧುಸೂದನನೆ 
ಪತಿತ ಪಾವನನೆ ವ್ಯಾಸ ವಿಠಲ ನೀನೇ|| 3 ||
*****