ಶೃಂಗಾರಪುರುಷರು ಬಹುಮಂದಿಯಿರಲುಅ.ಪ.
ಗುಷ್ಟುನಾರುವಮೈಯ್ಯಿ ಬಿಟ್ಟಿದ್ದಬಿರುಗಣ್ಣು
ಮುಟ್ಟಿನೋಡಿದರೆ ಮೈಯತಿ ಕಠಿಣವು
ಸೊಟ್ಟ ಮೋರೆಯು ಇವಗೆ ಎಷ್ಟುದ್ದ ಹಲ್ಲುಗಳು
ಇಷ್ಟು ಘೋರಮುಖದಳಿಯನೆಲ್ಲ್ಲಿ ದೊರಕಿದನೊ 1
ಬಡವನು ಭಿಕ್ಷುಕನು ಬಡಬನಂದದಿ ಕೋಪವು
ನೋಡಿದರೆ ತಲೆ ಜಟಿಯು ಕಟ್ಟಿಹುದು
ಬೆಡಗುನುಡಿಗಾರ ಜಾರ ಚೋರನಿಗೆ
ನೋಡಿ ನೋಡಿ ಹೆಣ್ಣ ಹ್ಯಾಂಗೆ ಕೊಟ್ಟನು 2
ಭಂಡನಾಗಿರುವನು ಕಂಡವರೊಡನೆ ಕಾಳಗವ
ಕೊಂಡುಬಹ ಬಲು ಉದ್ದಂಡನಿವನು
ಅಂಡಜವಾಹನಗೆ ಯೋಗ್ಯವಾದ ಹೆಣ್ಣ
ಕಂಡುಕಂಡೀ ಹಯವದನಗೆ ಕೊಟ್ಟನ್ಹ್ಯಾಗೆ 3
***
raagam: mukhAri taaLam: Eka
pallavi
hyAnge koTTanu heNNa sAgaranu I varage
anupallavi
shrungAra puruSaru bahumandiyiralu
caraNam 1
guSTunAruva maiyyi biTTidda birugaNNu muTTinODidare maiyyati kaThiNavu
soTTamOreyu ivage eSTudda hallugaLu iSTu ghOra mukhadaLiyanelli dorakidano
caraNam 2
baDavanu bhikSukanu baDabanandadi kOpanu nODidare tale jaTeyu kaTTihudu
beDagunuDigAra jAra cOranige nODi nODi heNNa hyAnge koTTanu
caraNam 3
banDanAgiruvanu kanDavaroDane kALagava konDu baha balu uddaNDanivanu
aNDajavAhanage yOgyavAda heNNa kaNDu kaNDI hayavadanage koTTanu hyAnge
***