Showing posts with label ಕೇಳಿಕೊ ಗುರುಬುದ್ಧಿ ಮನವೆ ಕೇಳಿಕೊ ಗುರುಬುದ್ಧಿ ಕೇಳಿ mahipati. Show all posts
Showing posts with label ಕೇಳಿಕೊ ಗುರುಬುದ್ಧಿ ಮನವೆ ಕೇಳಿಕೊ ಗುರುಬುದ್ಧಿ ಕೇಳಿ mahipati. Show all posts

Wednesday, 1 September 2021

ಕೇಳಿಕೊ ಗುರುಬುದ್ಧಿ ಮನವೆ ಕೇಳಿಕೊ ಗುರುಬುದ್ಧಿ ಕೇಳಿ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು


ಕೇಳಿಕೊ ಗುರುಬುದ್ಧಿ ಮನವೆ ಕೇಳಿಕೊ ಗುರುಬುದ್ಧಿ ಕೇಳಿ ನಡೆಯದಿದ್ದರೆ ನೀನು ಜನ್ಮಕ ಜಾರಿಬಿದ್ದಿ ಮನವೆ ಪ 


ವೇದಕ ನಿಲುಕದ ಹಾದಿಯದೋರುವ ಸದ್ಗರುವಿನ ಸುಬುದ್ಧಿ ಸಾಧಿಸಿ ನೋಡಲು ತನ್ನೊಳಗ ತಾ ಎದುರಿಡುವುದು ಸುಶುದ್ಧಿ ಭೆದಿಸದಲ್ಲದೆ ತಿಳಿಯದು ಎಂದಿಗೆ ಆದಿ ತತ್ವದ ನಿಜ ಶುದ್ಧಿ ಸುಬೋಧದಲಿ ಗೆದ್ದಿ 1 

ತರಣೋಪಾಯಕೆ ಸಾಧನವೇ ಮುಖ್ಯ ಗುರುಬುದ್ಧಿಯ ವಿಶೇಷ ಪರಗತಿ ಸಾಧನ ಪಡೆದೇನಂದರೆ ಗುರು ಮಾತ ಉಪದೇಶ ದೋರುದು ತಾ ಹರುಷ ಭವ ಬಂಧಪಾಶ 2 

ಗುರು ಘನಸೌಖ್ಯ ಸುರಮುನಿ ಜನರಿಗೆ ಬಲು ಅಗಮ್ಯದೋರುವದೆ ಆಠಕ್ಯ ತರಳ ಮಹಿಪತಿ ಮನವೆÀ ಕೇಳು ಗುರುರಾಯನ ಸುವಾಕ್ಯ ಪರ ಗೆಲಿಸುವದು ನಿಜಮುಖ್ಯ 3

***