Showing posts with label ಕೂಗಳತಿ ಎಂಬೊ ಸಂಶಯಸಲ್ಲಾಪ vijaya vittala. Show all posts
Showing posts with label ಕೂಗಳತಿ ಎಂಬೊ ಸಂಶಯಸಲ್ಲಾಪ vijaya vittala. Show all posts

Wednesday, 16 October 2019

ಕೂಗಳತಿ ಎಂಬೊ ಸಂಶಯಸಲ್ಲಾಪ ankita vijaya vittala

ಕೂಗಳತಿ ಎಂಬೊ ಸಂಶಯಸಲ್ಲಾಪ
ಸಮಚಿತ್ತದಲ್ಲಿ ಇದ್ದು | ಸಮ ವಿಷಮ ತಿಳಿದೆದ್ದು |
ಕುಮತ ಮತವನು ವದ್ದು | ಬಲು ಉಬ್ಬೆದ್ದು |
ಕಮಲ ಪೀಠನ ಹೊದ್ದು | ಕ್ರಮಣಿ ಯೋಪಾದಿಯಲಿದ್ದು |
ತಮಕ್ಕೆ ಹರಿನಾಮ ಮದ್ದು | ಶ್ರಮ ಕಳುಕದವಗೆ1

ಭಾಗವತರ ನೋಡಿ | ವೇಗ ಮನಸನು ಮಾಡಿ |
ಬಾಗಿ ಸಿರವನೆ ನೀಡಿ | ನಲಿದು ಪಾಡಿ | ಯೋಗವಾಗದೆ ಕೂಡಿ |
ಭೋಗವನು ಈಡಾಡಿ | ತೂಗಿ ಮೈಯಲಾಡಿ ಪುಣ್ಯದನವನಿಗೆ 2

ಹರಿ ಭಕುತಿಯ ಬೇಕು | ನರಹರಿಯ ಸ್ಮರಣೆ ಬೇಕು |
ಹರಿಕಥಾ ಬೇಕು | ಹರಿ ಎನಲಿ ಬೇಕು |
ಹರಿಯ ಭಜಿಸಲಿ ಬೇಕು | ಹರಿವೊಲಿಮೆ ಇರಬೇಕು |
ಹರಿಯಲ್ಲದಿಲ್ಲೆಂದು ಹರಿದು ನುಡಿದವನಿಗೆ 3

ಆಸಿಯನು ಕಳೆದು | ದುರ್ವಾಸನೆ ಹಮ್ಮು ಕಳೆದು |
ಕ್ಲೇಶವನು ಅಳಿದು | ತೋಷದಲಿ ಬೆಳೆದು |
ದೋಷರಾಶಿಗೆ ಮುಳಿದು | ದೂಷಕರನೆ ಅಳಿದು |
ಭೇಷಜವನೆ ಅಳಿದು | ದಾಸರ ಬಳಿಗೆ ಸುಳಿದವಗೆ 4

ಆಚಾರವನು ಪಿಡಿದು | ಸೂಚನೆ ಅರಿತು ನಡೆದು |
ವಾಚಗಳ ಮಿತಿ ನುಡಿದು | ನಾಮಗುಡಿದು |
ಸಿರಿ ವಿಜಯವಿಠ್ಠಲರೇಯನ |
ಯೋಚನಿಂದಲಿ ಬಿಡದೆ | ದಿನವ ಹಾಕುವನಿಗೆ 5
*********