Showing posts with label ಪಾತಾಳದೊಳಗಿಂದ ಬಂದ ವರ ಚಿಂತಾಮಣಿ ನಾರಸಿಂಹ rajesha hayamukha. Show all posts
Showing posts with label ಪಾತಾಳದೊಳಗಿಂದ ಬಂದ ವರ ಚಿಂತಾಮಣಿ ನಾರಸಿಂಹ rajesha hayamukha. Show all posts

Thursday, 5 August 2021

ಪಾತಾಳದೊಳಗಿಂದ ಬಂದ ವರ ಚಿಂತಾಮಣಿ ನಾರಸಿಂಹ ankita rajesha hayamukha

 ..

kruti by ವಿಶ್ವೇಂದ್ರತೀರ್ಥರು vishwendra teertharu sode mutt


ಪಾತಾಳದೊಳಗಿಂದ ಬಂದ ವರ

ಚಿಂತಾಮಣಿ ನಾರಸಿಂಹ ಪ


ಪಾಹಿ ಕರುಣಾಸಾಗರ ಶ್ರೀಹರಿಯೆ ಅ.ಪ

ಯೋಗಿ ನೀ ಗಣಗಳ ಕೊಂದು

ನಾಗಭೂಷಣನಿಗೊಲಿದಂಥ

ರಾಗದಿ ದೋಷವಿದೂರರ

ರಾಗದಿಂದಲಿ ಪಾಲಿಸುತಿರುವೆ ದೊರೆಯೆ 1


ಕೋಲಾವತಾರದ ಹರಿಯ ದಿವ್ಯ

ಲೋಲ ನೇತ್ರದಿ ಬಂದ ನದಿಯ

ವೇಲೆಯೊಳಗಿದ್ದು ಶೋಭಿಸುವ ವನ-

ಮಾಲಾದಿ ಭೂಷಿತನಿರುವಿ 2


ಬಾಲಗೊಲಿದೆ ಕಂಬದಲ್ಲಿ ಮತ್ತೆ

ಶೂಲಿಗೊಲಿದೆ ಪಾತಾಳದಲ್ಲಿ

ಚೆಲ್ವ ರಾಜೇಶಮುಖ ಹರಿಯೇ ನಿನ್ನ

ಬಲ್ಲಿದ ಜನರಿಗೆ ಸುಲಭ 3

***