ಕುಲಮದ ವೈಭವಮದ ವಿದ್ಯಾಮದಗಳನುಳಿದು ಹರಿದಾಸರ ಮರೆಯೊಕ್ಕು ಸುಖಿಯಾಗು ಪ.
ಚಿಪ್ಪಿನೊಳ್ಪುಟ್ಟಿದ ಮುತ್ತಿನ ಮಹಿಮೆಗೆತಪ್ಪೇನೊ ಮರುಳೆ ಮಾನವ ಪೇಳೆಯಸರ್ಪತÀಲ್ಪನ ಪೂಜೆಗುಚಿತನಾದರೆ ಅವನಇಪ್ಪತ್ತೊಂದು ಕುಲ ಸುಕುಲ ನೋಡಾ1
ಸುರರ ಸೋಲಿಸಿ ಸ್ವರ್ಗಸಿರಿಯ ಭೋಗಿಸಿದ ದೈ-ತ್ಯರ ಭಾಗ್ಯ ಬಿಸುಟುಪೋದುದ ಕೇಳೆಯಸ್ಥಿರವಲ್ಲ ಸಂಪತ್ತು ಪರಕೆ ಪ್ರತ್ಯಹವೆಂದರಿದುನರಹರಿಯ ಚರಣಸೇವೆಯ ಮಾಡು 2
ಎತ್ತು ಹೊತ್ತಗೆಯ ಹೊರೆ ಹೊತ್ತಡದಕೆ ಸಂ-ಪತ್ತೇನೋ ಮರುಳ ಸರ್ವಜ್ಞರುಂಟೆಭಕ್ತಿಯುಳ್ಳವನೊಬ್ಬ ನೆರೆಜಾಣ ಜಾಣರಿವರೆತ್ತ್ತೆಂದರಿಯದ ಹಯವದನನಂಘ್ರಿಯ ಬಲ್ಲ 3
***