Showing posts with label ಬುದ್ಧಿಯ ಪೇಳೇ ಗೋಪಮ್ಮ prasannavenkata. Show all posts
Showing posts with label ಬುದ್ಧಿಯ ಪೇಳೇ ಗೋಪಮ್ಮ prasannavenkata. Show all posts

Thursday, 14 November 2019

ಬುದ್ಧಿಯ ಪೇಳೇ ಗೋಪಮ್ಮ ankita prasannavenkata

by ಗೋವಿಂದದಾಸ
ಬುದ್ಧಿಯ ಪೇಳೇ ಗೋಪಮ್ಮ ನಿನ್ನಮುದ್ದು ಮಗನ ಲೂಟಿ ಘನವಾದುದಮ್ಮ ಪ

ಸದ್ದು ಇಲ್ಲದ ಹಾಗೆ ಬಂದಾನೆಕದ್ದು ಬೆಣ್ಣೆಯನೆಲ್ಲ ತಿಂದಾನೆಎದ್ದೊಮ್ಮೆ ನೋಡಿ ನಾ ಗದ್ದಲ ಮಾಡಲುಸದ್ದು ಮಾಡದೆ ಕೃಷ್ಣ ಹದ್ದನೇರುತ ಪೋದ 1

ಜಲಜ ಗಂಧಿನಿಯರು ಕೂಡೀ ನಾವುಜಲದೊಳಾಡುವುದನ್ನು ನೋಡೀಜಲಜನಾಭನು ಮರದ ತಲೆಯ ಮೇಲ್ಕಟ್ಟಿದಸುಲಿದಿಟ್ಟ ಸೀರೆಯ ಬಲರಾಮನನುಜ 2

ಹಾಲ ಮಾರಲು ಪೋದ ಮಗಳಾ ಕಂಡುಮೇಲೆ ಬೀಳುತ ಮಾಡೆ ಜಗಳಾಶಾಲೆಯ ಸುಲಿದು ಬತ್ತಲೆ ನಿಲ್ಲಿಸಿದನುಮೂರ್ಲೋಕದೊಡೆಂiÀುಶ್ರೀಲೋಲಗೋವಿಂದ 3
*******