..
Kruti by ಸಿರಿಗುರುತಂದೆವರದವಿಠಲರು sirigurutandevarada vittala
ಭಾರತಿದೇವಿ
ಭಕ್ತಿಯನು ನೀಡಮ್ಮ ಭಾರತೀದೇವಿ ಪ.
ಭಕ್ತಿ ದಾತೆಯು ಎಂದು ಶ್ರುತಿ ಶಾಸ್ತ್ರ ಸಾರುತಿವೆಅ.ಪ.
ಕಾಮ ಕ್ರೋಧಗಳೆಲ್ಲ ಮನೆಮಾಡಿಕೊಂಡುತಾವೆನೇಮದಿಂ ಪರಿಪರಿ ಕಾಡುತಿಹವುಪ್ರೇಮಿ ನಿನ್ನಯ ಪಾದಕಮಲದಲಿ ಮತಿ ಕೊಟ್ಟುಕಾಮನಯ್ಯನ ತೋರು ಸೋಮಶೇಖರ ಜನನಿ 1
ಮಧ್ವಮತದಲಿ ಎನಗೆ ಶ್ರದ್ಧೆ ಪುಟ್ಟದೆ ಪೋಯ್ತುಸಿದ್ಧವಾಗಿಹುದು ಮನ ದುರ್ವಿಷಯಕೆಬುದ್ಧಿವಂತಳೆ ನಿನ್ನ ಮುದ್ದು ಮುಖವನು ತೋರಿಉದ್ಧಾರ ಮಾಡೆ ಶ್ರೀ ಹದ್ದುವಾಹನ ತನಯೆ 2
ಕರುಣವಾರಿಧಿಯೆಂದು ಮರೆಯ ಪೊಕ್ಕೆನು ತಾಯೆಕರಪಿಡಿದು ಕಾಪಾಡೆ ಉರಗವೇಣಿಕರುಣಸಾಗರ ತಂದೆವರದವಿಠಲನನ್ನುನಿರುತದಿ ಭಜಿಸುವ ಭರತರಾಜನ ರಾಣಿ 3
***