ಅಕ್ಕನ ತದಿಗೆಯ ಹಿರಿಮೆ
ಅಕ್ಕನ ತದಿಗೆ
ಅಕ್ಕರದ ಅಣ್ಣ ತಮ್ಮನ ಕೂಡ
ನಕ್ಕು ನಲಿಯುವ ಹಬ್ಬಮನ
ಉಕ್ಕಿ ನಮಿಸುತ್ತ
ಮುಕ್ಕು ಅವಲಕ್ಕಿಗೊಲಿದವನ
ಲೆಕ್ಕವಿಲ್ಲದ ಭಾಗ್ಯ ಕೊಟ್ಟವನ
ಚಿಕ್ಕ ಸುಭದ್ರೆಯ ಅಣ್ಣನ
ಹಕ್ಕಿವಾಹನನ ನೆನೆಯುತ್ತ
ಪಕ್ವಾನ್ನಗಳ ಮಾಡಿ
ಸಕ್ಕರೆ ನೊರೆಹಾಲು ಪಾಯ ಸಗಳ ಮಾಡಿ
ಸಿಕ್ಕಷ್ಟು ಬಿರುಸ ಬಾಣಗಳ ಬಿಟ್ಟು
ಅಕ್ಕರೆಯಿಂದ ಮಕ್ಕಳ ಒಡಗೂಡಿ ದೇ
ವಕ್ಕಿ ಸುತನ ನೆನೆದು ಭುಂಜಿಸಿ
ದಿಕ್ಕು ದಿಕ್ಕಿಗೆ ಹರಿಯ ಧ್ಯಾನಿಸಿ
ಥಕ್ಕ ಥಕ್ಕ ಕುಣಿವ ಕೃಷ್ಣನ
ರಕ್ಕ ಸಾಂತಕನ ಗುಣವ ಹಾಡಿ
ಬೊಕ್ಕಸದ ಭಾಗ್ಯವ
ದಕ್ಕಿಸಿಕೊಳುವಂತೆ
ಠಕ್ಕ ತನವ ಮಾಡಿದವನ ಒಲುಮೆ
ಸಿಕ್ಕಷ್ಠು ಸಿಗಲೆಂದು
ಮಧ್ವೇಶ ಕೃಷ್ಣನ್ನ ಬೇಡುವೆ
********