Showing posts with label ಸೂರ್ಯ ಯತಿವರ್ಯ ಮಧ್ವಾರ್ಯರ ಸುಮತ ಸರೋಜಕೆ ಸುಶೀಲೇಂದ್ರ shyamasundara susheelendra teertha stutih. Show all posts
Showing posts with label ಸೂರ್ಯ ಯತಿವರ್ಯ ಮಧ್ವಾರ್ಯರ ಸುಮತ ಸರೋಜಕೆ ಸುಶೀಲೇಂದ್ರ shyamasundara susheelendra teertha stutih. Show all posts

Saturday, 1 May 2021

ಸೂರ್ಯ ಯತಿವರ್ಯ ಮಧ್ವಾರ್ಯರ ಸುಮತ ಸರೋಜಕೆ ಸುಶೀಲೇಂದ್ರ ankita shyamasundara susheelendra teertha stutih

susheelendra teertha rayara mutt yati 1926 stutih

ರಾಗ : ಶಂಕರ ತಾಳ : ಕೇರ್ವಾ


ಸೂರ್ಯ ಯತಿವರ್ಯ । ಮ ।

ಧ್ವಾರ್ಯರ ಸುಮತ 

ಸರೋಜಕೆ ಸುಶೀಲೇಂದ್ರ ।। ಪಲ್ಲವಿ ।।


ಬುಧ ಜನ ವಂದಿತ ।

ಸುಧಿ ಸುವ್ರತೀಂದ್ರರ ।

ಸದಮಲಘನ ಸದ್ ।

ಹೃದಯಾಕಾಶಕೆ ।। ಚರಣ ।।

ಧರಣಿ ಸುರಾಗ್ರಣಿ ।

ಗುರು ಸುಕೃತೀಂದ್ರರ ।

ಸುರಚಿರ ಸರಸಿಜ ।

ಕರ ಪೂರ್ವಾದ್ರಿಗೆ ।। ಚರಣ ।।


ಭೂಸುರ ಸೇವಿತ ।

ಪೂಶರ ವರ್ಜಿತ ।

ಭಾಸುರವರ । ಸಂ ।

ನಾಸ ಸುಛಾಯಕೆ ।। ಚರಣ ।।


ಬಗೆ ಬಗೆಯಿಂದಯಿಂದಲಿ ।

ನಿಗಮೋಕ್ತಿಯಲಿ ।

ರಘುವರನರ್ಚಿಪ ।

ಸುಗುಣವೆಂಬ ಹಗಲಿಗೆ ।। ಚರಣ ।।


ಶ್ಯಾಮಸುಂದರನ ।

ನಾಮವ ಪೊಗಳಿದ ।

ಪಾಮರ ಮತಿ ಜನ ।

ಸ್ತೋಮ ಯಾಮಿನಿಗೆ ।। ಚರಣ ।।

****