Showing posts with label ಮಂಗಳಮಾರುತಿ ನಂದನಿಗೆಮಂಗಳ ಭಾರತಿ ಸುಂದರಗೆ indiresha. Show all posts
Showing posts with label ಮಂಗಳಮಾರುತಿ ನಂದನಿಗೆಮಂಗಳ ಭಾರತಿ ಸುಂದರಗೆ indiresha. Show all posts

Monday, 2 August 2021

ಮಂಗಳಮಾರುತಿ ನಂದನಿಗೆಮಂಗಳ ಭಾರತಿ ಸುಂದರಗೆ ankita indiresha

ಮಂಗಳ ಮಾರುತಿ ನಂದನಿಗೆಮಂಗಳ ಭಾರತಿ ಸುಂದರಗೆ ಪ


ಮಂಗಳ ಮಾಧವನನು ದಿನ ಪಾಡುವಾನಂದತೀರ್ಥ ಸುರವಂದ್ಯನಿಗೆಅ.ಪ.


ತರುಣಿ ರೂಪದಿ ಮೋಹಿಸುತಗರಡಿ ಮನೆಯೊಳು ಬಾರೆನುತದುರುಳನ ಮುಂದಲೆಗುರುಳನು ಪಿಡಿದುಧರೆಯೊಳು ಕೆಡಹಿದಿ ನೀ ತ್ವರಿತಾ 1

ಎಲ್ಲರು ಬಂದರು ಕೀಚಕರುಫುಲ್ಲಾಕ್ಷಿಯ ಚಿತಿಕ್ಹಾಕಿದರುವಲ್ಲಭೆ ಚೀರುವ ಕೇಳುತಕ್ಷುಲ್ಲಕರ ಹೆಡೆ ಖಂಡಿಸಿ ನೂರಾರು 2

ಸೈಂಧವ ವೇಷದಿಯನು ಪಿಡಿಯೆಸುಂದರಿ ನಿನ್ನಗೆ ಅಲ್ಪರಿಯೆತಂದು ಅವನ ಅವಳಿಂದ ವಧಿಸಿದೆಇಂದಿರೇಶನ ಪ್ರಿಯ ಸುರದೊರೆಯೆ 3

****