Showing posts with label ಮುರಳಿಯ ನಾದವ ಕೇಳಿ ಬನ್ನೀ prasanna MURALIYA NAADAVA KELI BANNEEI. Show all posts
Showing posts with label ಮುರಳಿಯ ನಾದವ ಕೇಳಿ ಬನ್ನೀ prasanna MURALIYA NAADAVA KELI BANNEEI. Show all posts

Sunday, 19 December 2021

ಮುರಳಿಯ ನಾದವ ಕೇಳಿ ಬನ್ನೀ ankita prasanna MURALIYA NAADAVA KELI BANNEE







ಮುರಳಿಯ ನಾದವ ಕೇಳಿ ಬನ್ನೀ||2||
ಮಧುರನಾಥನು ಮುರಳಿಯನೂದಲು||2||
ಸುರಿವುದಾನಂದ ಜಲ...ಆ...ನಯನದಲೀ
ಸುರಿವುದಾನಂದ ಜಲ...ಆ....
||ಬನ್ನೀ ಮುರಳಿಯ||

ಕಂಗೊಳಿಸುವ ಬೆಳದಿಂಗಳಾ ಸೊಬಗಲಿ||2||
ತಂಗಾಳಿಯ ಸುಖದೀ...
ಶ್ರೀ ರಂಗನಾ||ಕಂಗೊಳಿಸುವ||
ಶ್ಯಾಮಲಾಂಗನು ತನ್ನ ಕೋಮಲ ಕರದಲ್ಲಿ||2||
ಆ ಮುರಳಿಯ ಪಿಡಿಯೇ
ಹ್ರದಯದಲಿ ಪ್ರೇಮವ ತುಂಬುವುದೂ
||ಬನ್ನೀ ಮುರಳಿ||

ಪಂಚಬಾಣನ ಪಿತ ಮುರಳಿಯ ಮಧುರಸ||2||
ಪಂಚಲೇಮಗೆ ರೋಮಾಂಚವಾಗುವುದು
‌‌ ||ಪಂಚಬಾಣ||
ರಜನೀಕಾಂತನ ಕುಲದಲಿ ಜನಿಸೀ....|2||
ವ್ರಜಜನಗಳಿಗಧಿಕಾ
ಪ್ರಸನ್ನನಾ ಮುರಳಿಯ ನಾದವ ಕೇಳಿ
‌‌ || ಬನ್ನೀ ಮುರಳಿಯ||
***