ಮುರಳಿಯ ನಾದವ ಕೇಳಿ ಬನ್ನೀ||2||
ಮಧುರನಾಥನು ಮುರಳಿಯನೂದಲು||2||
ಸುರಿವುದಾನಂದ ಜಲ...ಆ...ನಯನದಲೀ
ಸುರಿವುದಾನಂದ ಜಲ...ಆ....
||ಬನ್ನೀ ಮುರಳಿಯ||
ಕಂಗೊಳಿಸುವ ಬೆಳದಿಂಗಳಾ ಸೊಬಗಲಿ||2||
ತಂಗಾಳಿಯ ಸುಖದೀ...
ಶ್ರೀ ರಂಗನಾ||ಕಂಗೊಳಿಸುವ||
ಶ್ಯಾಮಲಾಂಗನು ತನ್ನ ಕೋಮಲ ಕರದಲ್ಲಿ||2||
ಆ ಮುರಳಿಯ ಪಿಡಿಯೇ
ಹ್ರದಯದಲಿ ಪ್ರೇಮವ ತುಂಬುವುದೂ
||ಬನ್ನೀ ಮುರಳಿ||
ಪಂಚಬಾಣನ ಪಿತ ಮುರಳಿಯ ಮಧುರಸ||2||
ಪಂಚಲೇಮಗೆ ರೋಮಾಂಚವಾಗುವುದು
||ಪಂಚಬಾಣ||
ರಜನೀಕಾಂತನ ಕುಲದಲಿ ಜನಿಸೀ....|2||
ವ್ರಜಜನಗಳಿಗಧಿಕಾ
ಪ್ರಸನ್ನನಾ ಮುರಳಿಯ ನಾದವ ಕೇಳಿ
|| ಬನ್ನೀ ಮುರಳಿಯ||
***
No comments:
Post a Comment