Showing posts with label ಅಪ್ರತಿ ಕೃಪಾನಿಧಿಯೆ ವೀರರಾಘವ ದೇವ prasannashreenivasa. Show all posts
Showing posts with label ಅಪ್ರತಿ ಕೃಪಾನಿಧಿಯೆ ವೀರರಾಘವ ದೇವ prasannashreenivasa. Show all posts

Thursday, 5 August 2021

ಅಪ್ರತಿ ಕೃಪಾನಿಧಿಯೆ ವೀರರಾಘವ ದೇವ ankita prasannashreenivasa

 ..


..

kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು

ವೀರರಾಘವ

ಅಪ್ರತಿ ಕೃಪಾನಿಧಿಯೆ ವೀರರಾಘವ ದೇವ

ಕ್ಷಿಪ್ರದಲೆ ಎನ್ನಭೀಷ್ಟಗಳ ಪೂರೈಸೊ ಪ


ಫಣಿಪಗಿರಿ ವೆಂಕಟನೆ ಎನ್ನ ಕುಲದೇವನೆ

ಅನಂತ ಗುಣಪರಿಪೂರ್ಣ ಅನಂತ ಸುಖರೂಪ

ವನಜೆಸಹ ನೀ ಇಲ್ಲಿ ವೀರರಾಘವನೆನಿಸಿ

ಫಣಿಶಾಯಿ ಕಾಮದನಾಗಿರುವೆ ವಿಧಿತಾತ 1

ನಿನ್ನ ದರ್ಶನ ಮಾಳ್ಪ ಜನರ ಕಾಮದನೆಂದು

ನಿನ್ನ ಬಳಿ ಬಂದಿಹೆನೊ ನಿನ್ನ ದಯದಿಂದ

ಎನ್ನಭೀಷ್ಟಗಳೆಲ್ಲ ನೀ ಬಲ್ಲೆಯೋ ಸ್ವಾಮಿ

ಘನ್ನ ಔದಾರ್ಯ ಕರುಣಾಂಬುಧಿಯೇ ಶರಣು 2

ವೇಧ ಮಂದಮುನಿಪೂಜ್ಯ ಬದರೀಶ ಉಡುಪೀಶ

ಸ್ವಾದಿ ಯತಿವರಪೂಜ್ಯ ಭೂಧರ ಹಯಾಸ್ಯ

ಪಾದತ್ರಯ ವಿಖ್ಯಾತ ವರದ ನರಹರಿ ರಂಗ

ಮದ್ಗೇಹನಿಲಯ ಶ್ರೀ ಪ್ರಸನ್ನ ಶ್ರೀನಿವಾಸ 3

***