Showing posts with label ನಿನಗಿಂತ ಅಧಿಕರು ನಿನ್ನಯ ಭಕುತರು ಇದಕೆ ಅನುಮಾನ vijaya vittala. Show all posts
Showing posts with label ನಿನಗಿಂತ ಅಧಿಕರು ನಿನ್ನಯ ಭಕುತರು ಇದಕೆ ಅನುಮಾನ vijaya vittala. Show all posts

Thursday, 17 October 2019

ನಿನಗಿಂತ ಅಧಿಕರು ನಿನ್ನಯ ಭಕುತರು ಇದಕೆ ಅನುಮಾನ ankita vijaya vittala

ವಿಜಯದಾಸ
ನಿನಗಿಂತ ಅಧಿಕರು ನಿನ್ನಯ ಭಕುತರು
ಇದಕೆ ಅನುಮಾನಗೊಳಬೇಡ ಅಂಬುಧಿಶಯನ ಪ

ಪದಿನಾಲ್ಕು ಲೋಕಗಳು ಪೊತ್ತೆನೆಂದೆನಬೇಡ
ಅದುಸಹಿತ ನಿನ್ನನು ಹೃದಯದೊಳಗೆ
ಹುದುಗಿಕೊಂಡಿಪ್ಪರೋ ಪದುಮನಾಭನೆ ಕೇಳೊ
ಇದರಿಂದ ಸರಿಮಿಗಿಲು ಆರೊ ಜನದೊಳಗೆ 1

ವನಜಾಂಡಗಳೆಲ್ಲ ಪೊತ್ತೆನೆಂದೆನಬೇಡ
ಕೊನೆಯ ನಾಲಿಗೆಯಲ್ಲಿ ನಿನ್ನ ನಿಲಿಸಿ
ಭಾರ ಇಲ್ಲದಂತಿಪ್ಪರೊ
ಘಣಿಶಯನ ಅಧಿಕಸಮರಾರೊ ಜಗದೊಳಗೆ 2

ಅಣುಮಹತ್ತು ಆದೆನೆಂದೆನೆಬೇಡವೊ
ಗಣನೆ ಇಲ್ಲದೆ ನಿನ್ನ ಕರದಿ ಮುಚ್ಚಿ
ಘಣಿ ಆಹಾರಗಾಮಿ ನಾ ವಿಜಯವಿಠ್ಠಲ ನಿನಗೆ
ಮಣಿದು ಲೆಕ್ಕಿಸರೋ ನಿನ್ನನು ಮೆಚ್ಚಿದಾಳುಗಳು3
************