Thursday, 17 October 2019

ನಿನಗಿಂತ ಅಧಿಕರು ನಿನ್ನಯ ಭಕುತರು ಇದಕೆ ಅನುಮಾನ ankita vijaya vittala

ವಿಜಯದಾಸ
ನಿನಗಿಂತ ಅಧಿಕರು ನಿನ್ನಯ ಭಕುತರು ||
ಇದಕೆ ಅನುಮಾನಗೊಳಬೇಡ ಅಂಬುಧಿಶಯನ|| ||ಪ||

|ಪದಿನಾಲ್ಕು ಲೋಕಗಳು ಪೊತ್ತೆನೆಂದೆನಬೇಡ |
ಅದುಸಹಿತ ನಿನ್ನನು ಹೃದಯದೊಳಗೆ ||
ಹುದುಗಿಕೊಂಡಿಪ್ಪರೋ*ಪದುಮನಾಭನೆ ಕೇಳೊ |
ಇದರಿಂದ ಸರಿಮಿಗಿಲು ಆರೊ ಜನದೊಳಗೆ ||೧||

||ವನಜಾಂಡಗಳೆಲ್ಲ ಪೊತ್ತೆನೆಂದೆನಬೇಡ |
ಕೊನೆಯ ನಾಲಿಗೆಯಲ್ಲಿ ನಿನ್ನ ನಿಲಿಸಿ ||
ಅಣುಮಾತ್ರ ಭಾರ ಇಲ್ಲದಂತಿಪ್ಪರೊ |
ಘಣಿಶಯನ ಅಧಿಕಸಮರಾರೊ ಜಗದೊಳಗೆ ||೨||
***

ನಿನಗಿಂತ ಅಧಿಕರು ನಿನ್ನಯ ಭಕುತರು
ಇದಕೆ ಅನುಮಾನಗೊಳಬೇಡ ಅಂಬುಧಿಶಯನ ಪ

ಪದಿನಾಲ್ಕು ಲೋಕಗಳು ಪೊತ್ತೆನೆಂದೆನಬೇಡ
ಅದುಸಹಿತ ನಿನ್ನನು ಹೃದಯದೊಳಗೆ
ಹುದುಗಿಕೊಂಡಿಪ್ಪರೋ ಪದುಮನಾಭನೆ ಕೇಳೊ
ಇದರಿಂದ ಸರಿಮಿಗಿಲು ಆರೊ ಜನದೊಳಗೆ 1

ವನಜಾಂಡಗಳೆಲ್ಲ ಪೊತ್ತೆನೆಂದೆನಬೇಡ
ಕೊನೆಯ ನಾಲಿಗೆಯಲ್ಲಿ ನಿನ್ನ ನಿಲಿಸಿ
ಭಾರ ಇಲ್ಲದಂತಿಪ್ಪರೊ
ಘಣಿಶಯನ ಅಧಿಕಸಮರಾರೊ ಜಗದೊಳಗೆ 2

ಅಣುಮಹತ್ತು ಆದೆನೆಂದೆನೆಬೇಡವೊ
ಗಣನೆ ಇಲ್ಲದೆ ನಿನ್ನ ಕರದಿ ಮುಚ್ಚಿ
ಘಣಿ ಆಹಾರಗಾಮಿ ನಾ ವಿಜಯವಿಠ್ಠಲ ನಿನಗೆ
ಮಣಿದು ಲೆಕ್ಕಿಸರೋ ನಿನ್ನನು ಮೆಚ್ಚಿದಾಳುಗಳು3
***

No comments:

Post a Comment