Showing posts with label ನೆನೆವೆನಾ ನೆನೆವರಿಗೊಲಿವನಾ ಅನುದಿನಾ ನೆನೆವನಾ gurumahipati. Show all posts
Showing posts with label ನೆನೆವೆನಾ ನೆನೆವರಿಗೊಲಿವನಾ ಅನುದಿನಾ ನೆನೆವನಾ gurumahipati. Show all posts

Wednesday, 1 September 2021

ನೆನೆವೆನಾ ನೆನೆವರಿಗೊಲಿವನಾ ಅನುದಿನಾ ನೆನೆವನಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ನೆನೆವೆನಾ ನೆನೆವರಿಗೊಲಿವನಾ ಅನುದಿನಾ ನೆನೆವನಾ| ಕಾವನಾ ಪಾವನಾ ದೇವನಾ ಪ 

ಗಜರಾಜ ಧ್ರವ ಪ್ರಲ್ಹಾದಂಬರೀಷನ| ಅಜಮಿಳ ವಿಭೀಷಣ ರುಕ್ಮಾಂಗದರ್ಜುನ| ಸುಜನ ಭೀಷ್ಮ ವಿದುರನ| ನಿಜವ ದೋರಿಧನ್ಯ ಗೈಸಿದವನಾ1 

ಮುರಾರಿ ವಾರಿಜಾರಿ ವಂಶ ವೀರಧೀರನಾ ಪಾರ ವಾರನಾ ಸುರ ಸಹಕಾರನಾ ಕರುಣಾಳು ಮೂರುತಿ ಪರಮೋದಾರನ ಗುರು ಮಹಿಪತಿಜ ಮನೋಹರನಾ2

***