Showing posts with label ತಪ್ಪದೆ ಲಭಿಸುವುದು ಶ್ರೀ ಗುರುಗಳ ದಿವ್ಯಕರುಣ janakiramana. Show all posts
Showing posts with label ತಪ್ಪದೆ ಲಭಿಸುವುದು ಶ್ರೀ ಗುರುಗಳ ದಿವ್ಯಕರುಣ janakiramana. Show all posts

Monday, 6 September 2021

ತಪ್ಪದೆ ಲಭಿಸುವುದು ಶ್ರೀ ಗುರುಗಳ ದಿವ್ಯಕರುಣ ankita janakiramana

  ankita janakiramana

ರಾಗ: ಮಧ್ಯಮಾವತಿ ತಾಳ: ಆದಿ 


ತಪ್ಪದೆ ಲಭಿಸುವುದು ಶ್ರೀ ಗುರುಗಳ ದಿವ್ಯಕರುಣ


ಒಪ್ಪುವಂತೆ ನೀ ಭಜಿಸು ಶ್ರೀ ಗುರುಗಳ ಭವ್ಯಚರಣ ಅ. ಪ


ತುಂಗಭದ್ರತೀರದಿ ರಂಗಮಂಟಪದಿ

ಯೋಗನಿದ್ರೆಯ ಮಾಡುವ ಗುರುಗಳ ದಿವ್ಯಕರುಣ 1

ಧರೆಯೊಳು ಅತಿಪೂಜ್ಯ ಶ್ರೀ ರಾಘವೇಂದ್ರ

ಗುರುಗಳ ಸ್ಮರಿಸುತ್ತ ಆಚರಿಸು ಮೌನವನು 2

ಸತ್ಯಧರ್ಮ ಮಾರ್ಗವ ಸತತ ಆಚರಿಸಿ

ಭಕ್ತರ ಸಲಹುವ ಯತಿಗಳ ಕರುಣ 3

ವರಕಲ್ಪವೃಕ್ಷವು ಸ್ಮರಿಸುವ ಜನಕೆ

ವರವೀವ ಕಾಮಧೇನು ನಮಿಪ ಸುಜನರಿಗೆ 4

ನಿರುತ ಶ್ರೀಜಾನಕಿರಮಣನ ಮನದಿ 

ಸ್ಮರಿಸುವ ಶ್ರೀ ರಾಘವೇಂದ್ರರ ಕರುಣ 5

***