ಕಾಖಂಡಕಿ ಶ್ರೀ ಕೃಷ್ಣದಾಸರು
ಸಂಗಮಾಡೆಲೋ ಶ್ರೀಹರಿ ದಾಸರಾ ಹಿಂಗಿ ಹೋಹುದು ತಾಭವದಾಸರಾ ಮಂಗಳ ಮಂಗಳಾತ್ಮಕ ಕೈಗೂಡಿ ಬಾಹನು ಅಂಗಜ ಜನಕ ಸಚತುರ್ಬಾಹನು 1
ಅವರ ವಾಕ್ಯ ಸುಧಾರಸ ಪಾನವಾ ಶ್ರವಣದಿಂದಲಿ ಮಾಡೆಲೊ ಪಾನವಾ ಭವದ ಜನ್ಮ ಜರಾಲಯ ಜಾರುವೀ ತವಕದಿಂದ ಚಿತ್ಸುಖ ಸೇರುವಿ 2
ಹಲವು ಸಾಧನಭರಿಗೆ ಬೀಳದೇ ಕಲಿತ ವಿದ್ಯತ್ವ ಗರ್ವವ ತಾಳದೇ ಬಲಿದು ಭಕ್ತಿಯ ಹೋಗದೆ ಸಿಂತರಾ ನೆಲಿಯ ಕೇಳೆಲೋಭಾವದಿ ಸಂತರಾ 3
ಮರಹು ಕತ್ತಲಿವೆಂಬುದು ಹಾರಿಸೀ ಅರಿಗಳಾರರೆ ಸಂಕಟ ಹಾರಿಸೀ ಅರಹು ಭಾಸ್ಕರ ತೋರುವ ಬೋಧಿಸಿ ಹೊರವ ಸಜ್ಜನ ಸಂಗವ ಸಾಧಿಸಿ 4
ನೆಲಿಯ ಹೊಂದುವ ಪರಿಯನಿಲ್ಲದೇ ಸುಲಭಸಾಧನ ತೋರಿಪರಲ್ಲದೇ ಬಳಲುವಾಬಾಹಳ ಸಾಪೇಳರು ಬಲಿದು ಪಾಯವ ಸಂತರ ಕೇಳರು 5
ಹರಿಕಥಾ ಮೃತಸಾರಸ ಪೇಳುತಾ ದುರಿತ ದುಷ್ಕøತ ತರುಗಳ ಶೀಳುತಾ ಪರಮ ಭಕ್ತಿಯ ಭಾಗ್ಯವ ಕುಡುವರು ಅರಿತು ಸಂತರ ಸಂಗವ ಬಿಡುವರು 6
ಏಳು ಭೂಮಿಕಿ ಮಾರ್ಗವ ತೋರಿಸಿ ಮಾಲ ಚಿತ್ಸುಖ ಮಂದಿರ ಸೇರಿಸಿ ಕಾಲಕರ್ಮದ ಕೋಟಲೆ ವಾರಿಸೀ ಪಾಲಿಸುವರು ಭವದಿಂತಾರಿಸಿ 7
ಸಂಗದಿಂ ಚಂದನಾಹದು ಪಾಮರಾ ಜಂಗಮೊತ್ತಮನಾಗನೇಪಾಮರಾ ಅಂಗದಿಂಮಾಡು ಸಂತರ ವಂದನಾ ಇಂಗಿಥೇಳಿದ ಮಹಿಪತಿ ನಂದನಾ 8
***