Showing posts with label ಸುಮ್ಮನಿರು ಮನವೆ ನಿನ್ನೊಳು ನೀನು ಸುಮ್ಮನಿರು ಮನವೆ purandara vittala. Show all posts
Showing posts with label ಸುಮ್ಮನಿರು ಮನವೆ ನಿನ್ನೊಳು ನೀನು ಸುಮ್ಮನಿರು ಮನವೆ purandara vittala. Show all posts

Friday, 6 December 2019

ಸುಮ್ಮನಿರು ಮನವೆ ನಿನ್ನೊಳು ನೀನು ಸುಮ್ಮನಿರು ಮನವೆ purandara vittala

ರಾಗ ಕಾಮವರ್ಧನಿ /ಪಂತುವರಾಳಿ ಛಾಪು ತಾಳ

ಸುಮ್ಮನಿರು ಮನವೆ, ನಿನ್ನೊಳು ನೀನು
ಸುಮ್ಮನಿರು ಮನವೆ ||

ಯಾರಾದರು ಆಡಲಿ ಅವರರ್ತಿಯ
ದೂರದಲಿ ನಿಂತು ನೋಡದಿರು
ಮೀರಿ ಅವರನ್ನು ನೀ ಅಹುದಲ್ಲವೆಂದರೆ
ಗಾರು ಮಾಡಿ ನಿನ್ನ ದೂರಿಗೆಳೆವೋರೋ ||

ಒಚ್ಚೊತ್ತು ಕೊಡೋರೊ ಒಚ್ಚೊತ್ತು ಬೇಡೋರೊ
ಒಚ್ಚೊತ್ತು ನಕ್ಕು ನಲಿಯುತಿಪ್ಪರು
ಹುಚ್ಚುಮನುಜರ ಸಂಗದೊಳಿದ್ದರೆ
ಹುಚ್ಚುಮಾಡಿ ನಿನ್ನ ರಚ್ಚೆಗೆಳೆವೋರೋ ||

ಒಂದನಾಡಿದರೆ ಒಂಭತ್ತನಾಡುವರು
ನಿಂದಿಸಿ ನುಡಿವರು ಗುರುಹರಿಯರ
ತಂದೆ ಪುರಂದರವಿಠಲರಾಯನ
ಕುಂದದೆ ಭಜಿಸಿ ನೀ ಸುಖಿಯಾಗು ಮನವೆ ||
***

pallavi

summaniru manave ninnoLu nInu summaniru manave

caraNam 1

yArAdaru Adali avarartiya dUradali nintu nODadiru
mIri avarannu nI ahudallavendare gAru mADi ninna dUrigeLevOrO

caraNam 2

occottu koDOro occottu bEDOro occottu nakku naliyutipparO
haccu manujara sangadoLiddare huccu mADi ninna raccegeLevOrO

caraNam 3

ondanDidare ombhattanADuvaru nindisi nuDivaru guruhariyara
tande purandara viTTalarAyana kundade bhajisi nI sukiyAgu manave
***