ರಾಯರೆ ಗತಿಯು ನಮಗೆ ||ಪ||
ವಾಯುಸುಮತೋದ್ಧಾರ
ಶ್ರೀ ರಾಘವೇಂದ್ರಗುರು ||ಅ.ಪ||
ಶುಕಪಿಕ ಮೊದಲಾದ ವಿಕುಲಕ್ಕೆ ಮಧುರಫಲ
ಯುಕುತ ಮಾಗಿಹ ಚೂತ ಸುಕುಜ ಗತಿಯು
ಮುಕುತಿಗೆ ಸುಜ್ಞಾನ ಭಕುತಿ ವಿರಕುತಿಗತಿಯ
ಅಕಳಂಕ ಶ್ರೀಮಂತ್ರಮಂದಿರದಿ ನೆಲೆಸಿಪ್ಪ ||೧||
ಋಷಿಗಳಿಗೆ ಪ್ರಣವೆಗತಿ ಝಷಗಳಿಗೆ ಜಲವೆ ಗತಿ
ಸಸಿಗಳಭಿವೃದ್ಧಿಗೆ ಶಶಿರವಿ ಗತಿಯೊ
ಶಿಶುಗಳಿಗೆ ಜನನಿಗತಿ ಪಶುಗಳಿಗೆ ತೃಣವೆ ಗತಿ
ಅಸಮ ಮಹಿಮೆಯಲಿ ಮೆರೆವ ಮಿಸುನಿ ಶಯ್ಯಜರಾದ ||೨||
ಕಾಮಿನಿ ಮಣಿಯರಿಗೆ ಕೈಪಿಡಿದ ಕಾಂತಗತಿ
ಭೂಮಿ ಬುಧರಿಗೆ ಮಧ್ವಶಾಸ್ತ್ರ ಗತಿಯೊ
ತಾಮರಸ ಸಖ ಸುತನ ಧಾಮ ಭಯ ಪೋಪುದಕೆ
ಶಾಮಸುಂದರವಿಠಲ ಸ್ವಾಮಿ ನಾಮವೆ ಗತಿಯೊ ||೩||
***
ರಾಗ : ಕಾಂಬೋಧಿ ತಾಳ : ಝಂಪೆ (raga tala may differ in audio)
( ಶ್ರೀ ಶ್ಯಾಮಸುಂದರದಾಸರ ಕಣ್ಣಲ್ಲಿ ಶ್ರೀ ಗುರುಸಾರ್ವಭೌಮರು )
ರಾಯರೇ ಗತಿಯು ನಮಗೆ ।
ವಾಯು ಸುಮತೋದ್ಧಾರ ಶ್ರೀ ರಾಘವೇಂದ್ರ ಗುರು ।। ಪಲ್ಲವಿ ।।
ಶುಕ ಪಿಕ ಮೊದಲಾದ ವಿಕುಲಕ್ಕೆ ಮಧುರ ಫಲ ।
ಯುಕುತವಾಗಿಹ ಚೂತ ಸುಕುಜ ಗತಿಯೋ ।
ಮುಕುತಿಗೆ ಸುಜ್ಞಾನ ಭಕುತಿ ವಿರಕುತಿ ಗತಿಯು ।
ಅಕಳಂಕ ಶ್ರೀಮಂತ್ರ ಮಂದಿರದಿ ನೆಲೆಸಿಪ್ಪ ।। ಚರಣ ।।
ಋಷಿಗಳಿಗೆ ಪ್ರಣವೆ ಗತಿ ರುಷಗಳಿಗೆ ಜಲವೆ ಗತಿ ।
ಸಸಿಗಳಭಿವೃದ್ಧಿಗೆ ಶಶಿ ರವಿ ಗತಿಯೋ ।
ಶಿಶುಗಳಿಗೆ ಜನನಿ ಗತಿ ಪಶುಗಳಿಗೆ ತೃಣವೆ ಗತಿ ।
ಅಸಮ ಮಹಿಮೆಯಲಿ ಮೆರೆವ ಮಿಸುನಿಶಯ್ಯನಜರಾದ ।। ಚರಣ ।।
ಕಾಮಿನಿ ಮಣಿಯರಿಗೆ ಕೈಪಿಡಿದ ಕಾಂತ ಗತಿ ।
ಭೂಮಿ ಬುಧರಿಗೆ ಮಧ್ವ ಶಾಸ್ತ್ರ ಗತಿಯೋ ।
ತಾಮರಸ ಸಖ ಸುತನ ಧಾಮ ಭಯ ಪೋಪುದಕೆ ।
ಶ್ಯಾಮಸುಂದರವಿಠ್ಠಲ ಸ್ವಾಮಿ ನಾಮವೆ ಗತಿಯೋ ।। ಚರಣ ।।
***
Rayare gatiyu namage। vayu sumatod’dhara sri raghavendra guru।। pallavi।।
suka pika modalada vikulakke madhura phala।
yukutavagiha cuta sukuja gatiyo।
mukutige sujnana bhakuti virakuti gatiyu।
akalanka srimantra mandiradi nelesippa।। carana।।
rsigalige pranave gati
rusagalige jalave gati।
sasigalabhivrd’dhige sasi ravi gatiyo।
sisugalige janani gati pasugalige trnave gati।
asama mahimeyali mereva misunisayyanajarada।। carana।।
kamini maniyarige kaipidida kanta gati।
bhumi budharige madhva sastra gatiyo।
tamarasa sakha sutana dhama bhaya popudake।
syamasundaraviththala svami namave gatiyo।। carana।।
***
Rayare gatiyu namage ||pa||
Vayusumatoddhara
sri raghavendraguru ||a.pa||
Shukapika modalada vikulakke madhuraphala
yukuta magiha chuta sukuja gatiyu
mukutige sujnana bhakuti virakutigatiya
akalanka srimantramandiradi nelesippa ||1||
Rushigalige pranavegati jhashagalige jalave gati
sasigalabhivruddhige shashiravi gatiyo
shiishugalige jananigati pashugalige trunave gati
asama mahimeyali mereva misuni shayyajarada ||2||
Kamini maniyarige kaipidida kantagati
bhumi budharige madhvashastra gatiyo
tamarasa sakha sutana dhama bhaya popudake
shamasundaravittala svami namave gatiyo ||3||
***
ರಾಯರೇ ಗತಿಯು ನಮಗೆ ।
ವಾಯುಸುಮತೋದ್ಧಾರ ಶ್ರೀ ರಾಘವೇಂದ್ರ ಗುರು ।। ಪಲ್ಲವಿ ।।
ಶುಕ ಪಿಕ ಮೊದಲಾದ ವಿಕುಲಕ್ಕೆ ಮಧುರ ಫಲ ।
ಯುಕುತಮಾಗಿಹ ಚೂತ ಸುಕುಜ ಗತಿಯೋ ।
ಮುಕುತಿಗೆ ಸುಜ್ಞಾನ ಭಕುತಿ ವಿರುಕುತಿ ಗತಿಯು ।
ಅಕಳಂಕ ಶ್ರೀಮಂತ ಮಂದಿರದಿ ನೆಲಸಿಪ್ಪ ।। ಚರಣ ।।
ಋಷಿಗಳಿಗೆ ಪ್ರಣವವೇ ಗತಿ ಝಷಗಳಿಗೆ ಜಲವೇ ಗತಿ ।
ಸಸಿಗಳಭಿವೃದ್ಧಿಗೆ ಶಶಿಯೇ ಗತಿಯು ।
ಶಿಶುಗಳಿಗೆ ಜಲವೆ ಗತಿ ಪಶುಗಳಿಗೆ ತೃಣವೆ ಗತಿ ।
ಈಸು ಮಹಿಮೆಲಿ ಮೆರೆವ ಮಿಸುನಿ ಶಯ್ಯಜರಾದ ।। ಚರಣ ।।
ಕಾಮಿನೀ ಮಣಿಯರಿಗೆ ಕೈಪಿಡಿದ ಕಾಂತ ಗತಿ ।
ಭೂಮಿ ವಿಬುಧರಿಗೆ ಮಧ್ವ ಶಾಸ್ತ್ರ ಗತಿಯೋ ।
ತಾಮರಸ ಸಖ ಸುತನ ಭಯ ಪೋಪುವುದಕೆ । ಶ್ರೀ ।
ಶ್ಯಾಮಸುಂದರ ವಿಠ್ಠಲ ಸ್ವಾಮಿ ನಾಮವೇ ಗತಿಯೋ ।। ಚರಣ ।।
****
ರಾಗ : ಹಂಸಾನಂದೀ ತಾಳ : ಆದಿ (raga tala may differ in audio)
ವಿವರಣೆ-ಆಚಾರ್ಯ ನಾಗರಾಜು ಹಾವೇರಿ,ಗುರು ವಿಜಯ ಪ್ರತಿಷ್ಠಾನ
ಶ್ರೀ ವ್ಯಾಸರಾಜ - ಶ್ರೀ ರಾಘವೇಂದ್ರತೀರ್ಥರು. ಇವರಲ್ಲೂ ಸಹಾ ಶ್ರೀ ವಾಯುದೇವರು ನಿತ್ಯಾವೇಶದಿಂದ ಇರುತ್ತಾರೆಂದು ಸ್ಪಷ್ಟ!
ಶುಕ = ಗಿಳಿ
ಪಿಕ = ಕೋಗಿಲೆ
ವಿಕುಲ = ಪಕ್ಷಿ ಕುಲ
ಚೂತ ಸುಕುಜ = ಒಳ್ಳೆಯ ಮಾವಿನ ಮರ
ಪ್ರಣವ = ಓಂಕಾರ
ರುಷಗಳು = ಜಲಚರ ಪ್ರಾಣಿಗಳು
ಮಿಸುನಿಶಯ್ಯಜ = ಹಿರಣ್ಯಕಶಿಪುವಿನ ಮಗ
ತಾಮರಸ ಸಖ = ಕಮಲದ ಹೂವಿಗೆ ಮಿತ್ರನಾದ ಸೂರ್ಯ
ಸುತನ = ಯಮಧರ್ಮರಾಜರ
ಧಾಮ = ಪುರಕ್ಕೆ
ಶ್ರೀ ರಾಯರನ್ನು ಯಾರು ಅತ್ಯಂತ ಭಕ್ತಿ ಶ್ರದ್ಧೆಗಳಿಂದ ಪೂಜಿಸುತ್ತಾರೋ, ಭಜಿಸುತ್ತಾರೋ, ಶ್ರೀ ರಾಯರೇ ಗತಿಯೆಂದು ಸರ್ವ ಕಾಲಗಳಲ್ಲಿಯೂ ಸೇವಿಸುತ್ತಾರೋ ಅವರಿಗೆ ಶ್ರೀ ಯಮಧರ್ಮರಾಜರ ಭಯವು ಅಂದರೆ " ನರಕ " ದ ಭಯ ಇಲ್ಲ ಎನ್ನುವುದನ್ನು ಶ್ರೀ ಶ್ಯಾಮಸುಂದರದಾಸರು ಶ್ರೀ ರಾಘವೇಂದ್ರ ಗುರುರಾಯರ ಅದ್ಭುತ ಮಹಿಮೆಯನ್ನು ಅತಿ ಮನೋಜ್ಞವಾಗಿ ಸರಳ ಸುಂದರವಾಗಿ ತಿಳಿಸಿದ್ದಾರೆ.
****
ರಾಗ : ಹಂಸಾನಂದೀ ತಾಳ : ಆದಿ
ರಾಯರೇ ಗತಿಯು ನಮಗೆ ।
ವಾಯುಸುಮತೋದ್ಧಾರ
ಶ್ರೀ ರಾಘವೇಂದ್ರ ಗುರು ।। ಪಲ್ಲವಿ ।।
ಶುಕ ಪಿಕ ಮೊದಲಾದ
ವಿಕುಲಕ್ಕೆ ಮಧುರ ಫಲ ।
ಯುಕುತಮಾಗಿಹ
ಚೂತ ಸುಕುಜ ಗತಿಯೋ ।
ಮುಕುತಿಗೆ ಸುಜ್ಞಾನ
ಭಕುತಿ ವಿರುಕುತಿ ಗತಿಯು ।
ಅಕಳಂಕ ಶ್ರೀಮಂತ
ಮಂದಿರದಿ ನೆಲಸಿಪ್ಪ ।। ಚರಣ ।।
ಋಷಿಗಳಿಗೆ ಪ್ರಣವವೇ ಗತಿ
ಝಷಗಳಿಗೆ ಜಲವೇ ಗತಿ ।
ಸಸಿಗಳಭಿವೃದ್ಧಿಗೆ
ಶಶಿಯೇ ಗತಿಯು ।
ಶಿಶುಗಳಿಗೆ ಜಲವೆ ಗತಿ
ಪಶುಗಳಿಗೆ ತೃಣವೆ ಗತಿ ।
ಈಸು ಮಹಿಮೆಲಿ ಮೆರೆವ
ಮಿಸುನಿ ಶಯ್ಯಜರಾದ ।। ಚರಣ ।।
ಕಾಮಿನೀ ಮಣಿಯರಿಗೆ
ಕೈಪಿಡಿದ ಕಾಂತ ಗತಿ ।
ಭೂಮಿ ವಿಬುಧರಿಗೆ
ಮಧ್ವ ಶಾಸ್ತ್ರ ಗತಿಯೋ ।
ತಾಮರಸ ಸಖ ಸುತನ
ಭಯ ಪೋಪುವುದಕೆ । ಶ್ರೀ ।
ಶ್ಯಾಮಸುಂದರ ವಿಠ್ಠಲ
ಸ್ವಾಮಿ ನಾಮವೇ ಗತಿಯೋ ।। ಚರಣ ।।
****
ವಿವರಣೆ-ಆಚಾರ್ಯ ನಾಗರಾಜು ಹಾವೇರಿ,ಗುರು ವಿಜಯ ಪ್ರತಿಷ್ಠಾನ
ಶುಕ = ಗಿಳಿ
ಪಿಕ = ಕೋಗಿಲೆ
ವಿಕುಲ = ಪಕ್ಷಿ ಕುಲ
ಚೂತ ಸುಕುಜ = ಒಳ್ಳೆಯ ಮಾವಿನ ಮರ
ಪ್ರಣವ = ಓಂಕಾರ
ರುಷಗಳು = ಜಲಚರ ಪ್ರಾಣಿಗಳು
ಮಿಸುನಿಶಯ್ಯಜ = ಹಿರಣ್ಯಕಶಿಪುವಿನ ಮಗ
ತಾಮರಸ ಸಖ = ಕಮಲದ ಹೂವಿಗೆ ಮಿತ್ರನಾದ ಸೂರ್ಯ
ಸುತನ = ಯಮಧರ್ಮರಾಜರ
ಧಾಮ = ಪುರಕ್ಕೆ
ಶ್ರೀ ರಾಯರನ್ನು ಯಾರು ಅತ್ಯಂತ ಭಕ್ತಿ ಶ್ರದ್ಧೆಗಳಿಂದ ಪೂಜಿಸುತ್ತಾರೋ, ಭಜಿಸುತ್ತಾರೋ, ಶ್ರೀ ರಾಯರೇ ಗತಿಯೆಂದು ಸರ್ವ ಕಾಲಗಳಲ್ಲಿಯೂ ಸೇವಿಸುತ್ತಾರೋ ಅವರಿಗೆ ಶ್ರೀ ಯಮಧರ್ಮರಾಜರ ಭಯವು ಅಂದರೆ " ನರಕ " ದ ಭಯ ಇಲ್ಲ ಎನ್ನುವುದನ್ನು ಶ್ರೀ ಶ್ಯಾಮಸುಂದರದಾಸರು ಶ್ರೀ ರಾಘವೇಂದ್ರ ಗುರುರಾಯರ ಅದ್ಭುತ ಮಹಿಮೆಯನ್ನು ಅತಿ ಮನೋಜ್ಞವಾಗಿ ಸರಳ ಸುಂದರವಾಗಿ ತಿಳಿಸಿದ್ದಾರೆ.
ನಮ್ಮ ನಿಮ್ಮೆಲ್ಲರಿಗೂ ರಾಯರೇ ಗತಿಯು
ಶ್ರೀ ರಾಘವೇಂದ್ರ ಗುರುರಾಯರೇ ಗತಿಯು.....
***