Showing posts with label ಸುಂದರಮಯವಾದ ದ್ವಂದ್ವ vijaya vittala suladi ಪಾಂಡುರಂಗ ಸುಳಾದಿ SUNDARAMAYAVAADA DWANDA PANDURANGA SULADI. Show all posts
Showing posts with label ಸುಂದರಮಯವಾದ ದ್ವಂದ್ವ vijaya vittala suladi ಪಾಂಡುರಂಗ ಸುಳಾದಿ SUNDARAMAYAVAADA DWANDA PANDURANGA SULADI. Show all posts

Sunday 8 December 2019

ಸುಂದರಮಯವಾದ ದ್ವಂದ್ವ vijaya vittala suladi ಪಾಂಡುರಂಗ ಸುಳಾದಿ SUNDARAMAYAVAADA DWANDA PANDURANGA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀ ಪಾಂಡುರಂಗ ಸುಳಾದಿ 

 ರಾಗ ಅಭೋಗಿ 

 ಧ್ರುವತಾಳ 

ಸುಂದರಮಯವಾದ ದ್ವಂದ್ವ ಚರಣವನ್ನು ।
ಇಂದು ಕಂಡೆನು ಬಂದು ।
ಅಂದು ಕಾಳಿಂದಿಯಾ ಧುಮುಕಿ ನಾ - ।
ಗೇಂದ್ರನಾ ಫಣಿಯಲ್ಲಿ ಕುಣಿಕುಣಿದಾಡಲು ।
ದುಂದುಭಿ ರಭಸಾ ಮೊರಿಯೆ ಗಗನ - ।
ದಿಂದಲೆ ಪೂಮಳೆ ಬಿಡದೆ ಸುರಿಯೆ ।
ವೃಂದಾರಕವೃಂದ ಚಂದಾಗಿ ಸರಸಿಜ ।
ನಂದನ ಸಹಿತ ವಂದನೆ ಗೈವುತಿರೆ ।
ನಂದನಂದನ ಗೋಪಿಯ ಕಂದ ।
ಅಂದಂದಾಡಿದ ಗೋವಿಂದ ವಿಜಯವಿಠ್ಠಲಾ ।
ನಿಂದು ನಲುವಿಂದಾ ಮೆರೆವೆನು ಇಲ್ಲಿ ।
ಇಂದಿರೆಯರಸನ ನಂದ ಮೂರುತಿಯಾ ॥ 1 ॥

 ಮಟ್ಟತಾಳ 

ಇದೆ ವೈಕುಂಠಾ ಇದೆ ಶ್ವೇತದ್ವೀಪ ।
ಇದೆನಂತಾಸನ ಇದೆ ಗೋಕುಲವೋ ।
ಇದೆ ವೃಂದಾವನ ಇದೆ ದ್ವಾರಾವತಿ ।
ಇದೆ ನಮ್ಮಾ ಯದುಪತಿ ಇಪ್ಪಾನಗರಾ ।
ಇದೆ ನಮ್ಮ ತಿರುಮಲಾ ವಿಜಯವಿಠಲ ನಿಪ್ಪ ಸಂಭ್ರಮವೋ ॥ 2 ॥

 ತ್ರಿವಿಡಿತಾಳ 

ಧನ್ಯ ನಾನಾದಿನೋ ದಾನ್ನವಾರಿಯಾ ಕಂಡು ।
ಎನ್ನ ಸಂಸ್ಕಾರಕ್ಕೆ ಪಡೆಗಾಣೆ ಪಡೆಗಾಣೆ ।
ಅನ್ಯಾಯಗೊಳಿಸುವ ದುರುಳ ವೃತ್ತಿಗಳೆಲ್ಲಾ ।
ಬೆನ್ನು ತೋರಿದವಯ್ಯಾ ಬೀಳುವಾದರಿಯಾದೆ ।
ಅನ್ನ್ಯಾ ದೇವರಿಗೆ ಶಿರವಾಗಿ ಶಿರವಾಗಿ ಶ - ।
ರಣು ಶರಣೆನ್ನಿನೋ ಆವಾವ ಕಾಲದಲ್ಲಿ ।
ರನ್ನ ಕೈ ಸೇರಾಲು ಗಾಜುಮಣಿ ಬಯಸುವಿನೆ ।
ತನ್ನಿಂದ ತಾವೊಲಿದ ವಿಜಯವಿಠ್ಠಲ ಕರ - ।
ವನ್ನು ಪಿಡಿಯೆ ಎನಗೆ ಇನ್ನು ಯಾತರ ಭೀತಿ ॥ 3 ॥

 ಅಟ್ಟತಾಳ 

ಮೈಲಿಗಿಯವ ನಾನಾದಡೆ ಜಗದಯ್ಯಾ ।
ಅಯ್ಯಾನೆ ನಿನ್ನ ಮಂಗಳವಾದ ನಾಮಕ್ಕೆ ।
ಮೈಲಿಗಿ ಉಂಟೇನೋ ಮದನಾರಿಯ ಒಡೆಯಾ ।
ಮೈಲಾರಿ ಜೊಕ್ಕನು ಆವ ಕುಲದವ ।
ಅಯ್ಯಾ ವಿಜಯವಿಠ್ಠಲಾ ನುದಿನ ನೀನೊಲಿಯೆ ।
ವೈವಾದು ಸದ್ಗತಿಗೆ ಒಂದೆ ನಾಮವೆ ನೆನಿಯ ॥ 4 ॥

 ಆದಿತಾಳ 

ಹರಿದು ಎಂತನ್ನರಿಯಾದ ನರರಿಗೆ ।
ಶರಣ ಜನರಿಗೆ ಬಲು ಮರಳು ಕಾಣೋ ಪಾಂಡುರಂಗಾ ।
ವರ ಇಟ್ಟಂಗಿ ಮೇಲೆ ಸ್ಥಿರವಾಗಿ ನಿಂದಾ ।
ಸಿರಿಧರಪತಿ ವಿಜಯವಿಠ್ಠಲಾ ।
ಗುರುಪುರಂದರನ ಪ್ರೀಯಾ ॥ 5 ॥

 ಜತೆ 

ಪಂಢರಿರಾಯಾ ಪ್ರಾಕೃತವಿರಹಿತ ಕಾಯಾ ।
ಪುಂಡರೀಕ ವರದ ವಿಜಯವಿಠ್ಠಲರೇಯಾ  ॥
************