ಗಾಡಿಯೆತ್ತಲಿಂದ ಬಂದುದೇ ಮಾತ
ನಾಡಲರಿಯದಿಪ್ಪ ಹೊಚ್ಚಹೊಸ ಹರೆಯದ ಮುಗುದೆಗೀ ಪ
ಬಳುಕೆ ಸಿಂಹಮಧ್ಯ ಬಟ್ಟ ಮೊಲೆಗಳದುರೆ ತೋರವಾದ
ಬಳಲುಮುಡಿಯೊಳಲರು ಒಯ್ಯನಿಳೆಯೊಳುದುರಲೂ
ಜಲಜಮುಖದಿ ಬೆವರುದೋರೆ ವಲಯತೋರಹಾರ ಉರದಿ
ಘಲಿರು ಘಲಿರನುಲಿವ ಕುಲುಕಿ ಕುಲಕಿ ನಡೆವ ಯೀ 1
ಮಿಸುಪ ಮಂದಹಾಸ ಮುಖದಿ ಮಸಗಿದಂತ ಕಾಂತಿ ಲಜ್ಜೆ
ಮುಸುಕೆ ಮಿಸುಪ ಕದಪಿನಲ್ಲಿ ಎಸೆವ ಓಲೆ ಢಾಳಿಸೆ
ಸಸಿನೆ ತಿದ್ದಿ ಉರದಿ ಜರಿವ ವಸನವನ್ನು ಸಂತವಿಸುತ
ಉಸುರಿಲಿಂದ ಗಂಧವನ್ನು ಎಸಸಿಬಿಡುವ ನಡೆವ ಯೀ 2
ಕರವನೊಯ್ಯನೊಲಿದು ರೋಜಗಿರಿಯ ಮೇಲೆ ಬಾಲಚಂದ್ರ
ನಿರಲುಸೆರಗಮರೆಯಮಾಡಿ ಮರಳಿಮರಳಿನೋಡುತಾ
ಸ್ಮರನತಾತ ಸುರನಗರ ದೆರೆಯ ಲಕ್ಷ್ಮಿಯರಸನೊಡನೆ
ನೆರೆದಪರಿಯ ಸಿರಿಯ ಗರುವಗಮನದಾ ಯೀ 3
****