Showing posts with label ಕಲುಷಗಳ ಪರಿಹರಿಸು ಕಲುಷಕಂಠಾ tandevaradagopala vittala. Show all posts
Showing posts with label ಕಲುಷಗಳ ಪರಿಹರಿಸು ಕಲುಷಕಂಠಾ tandevaradagopala vittala. Show all posts

Thursday, 5 August 2021

ಕಲುಷಗಳ ಪರಿಹರಿಸು ಕಲುಷಕಂಠಾ ankita tandevaradagopala vittala

 ..


kruti: tandevaradagopala vittala (ಪ್ರಹ್ಲಾದಗೌಡರು)


ಕಲುಷಗಳ ಪರಿಹರಿಸು ಕಲುಷಕಂಠಾ ಪ


ಸುಮ ಶರಗಳಿಂದಲಿ ಬೆಂದು ನೊಂದು ತವ ದ್ವಂದ್ವಗಳಿಗಭಿವಂದಿಸುವೆನೊ ರಾಜ ಅ.ಪ.


ತಾಪಗಳಿಗೊಳಗಾಗಿ ಪರರ ತಾಪವನು ಕಾಣದೆ ಆಲಾಪನೆಯ ಮಾಡುತಲಿ ಕೂಪದೊಳು ಪೋಪ ನೋಡುವೆನಯ್ಯ ಜೀಯ್ಯಾ 1

ಬರುವದೆಂತೆಂದು ಬಯಸಬಾರದ ವಿಷಯಗಳ ಬಯಸಿ ಭವದೊಳಗೆ ಬವಣೆ ಬಡುವೆನು ಪರಿಹರಿಸು ಭವಕೆ ಭೀಮಾ 2

ಕಾಮನಯ್ಯನೆ ಕೇಳು ಕಾಮಗಳ ಪೂರೈಸು ಕಾಮಿನಿಯರಾ ಕಂಡು ಮೋಹಿಸಿದ ಕಾರಣದಿ ಪೂರೈಸು ಮನಾಧಿಪ ತಂದೆವರದಗೋಪಾಲವಿಠಲನ ದೂತಾ 3

***