Showing posts with label ಏನು ಹೇಳಲಿ ಕೂಸಿನ ಚರ್ಯಮಾನಿನಿ indiresha. Show all posts
Showing posts with label ಏನು ಹೇಳಲಿ ಕೂಸಿನ ಚರ್ಯಮಾನಿನಿ indiresha. Show all posts

Saturday, 28 December 2019

ಏನು ಹೇಳಲಿ ಕೂಸಿನ ಚರ್ಯಮಾನಿನಿ ankita indiresha

ಏನು ಹೇಳಲಿ ಕೂಸಿನ ಚರ್ಯಮಾನಿನಿ ಉಳಿದದ್ದ ಆಶ್ಚರ್ಯ ಪ

ಪುಟ್ಟಿದೇಳನೆಯ ದಿನವೆ ಬಾಲಗ್ರಹ ಬಂದುಎಷ್ಟು ಕಾಡಿದಳು ನಮ್ಮಪ್ಪನಸೃಷ್ಟಿಪಾಲಕ ಸಿರಿವಿಷ್ಣು ದಯದಿಂದಕಷ್ಟ ಕಳೆದು ನಮ್ಮ ಕೂಸು ಉಳಿದಿತೇ 1

ಒಂದು ಮಾಸದ ಕೂಸು ಅಂದು ಬಂಡಿಯ ಕೆಳಗೆಹೊಂದಿಸಿ ಮಲಗಿಸಿದ್ದೆನೇ ನಾನುಅಂದು ಹಸಿದು ಮುಖದಿಂದ ಬೆರಳನೆ ಚೀಪಿಬಂಧ ಕಳೆದು ಹೀಂಗೆ ಬದುಕಿತೇ 2

ದುಷ್ಟತನವು ಬಹಳ ಎಂದು ಒರಳಿಗೆಕಟ್ಟಿಹಾಕಿದೆ ಇವನ ಒಂದಿನಾಬೆಟ್ಟದಂತೆರಡು ಮರಗಳು ಬೀಳಲು ಮಧ್ಯ ಪುಟ್ಟ ನಮ್ಮಪ್ಪ ಹ್ಯಾಂಗೆ ಬದುಕಿತೆ 3

ಅಂಗಳದೊಳಗೆ ಆಡುತ ಕುಳಿತಿದ್ದ ಕೂಸಿನಾ-ಮಂಗಳಾ ಘಾಳಿ ಬಂದೊಯಿತೆಅಂಗನೇರೆಲ್ಲರೂ ಅಳುತ ಕೂತೇವಲ್ಲೆ ನರ-ಸಿಂಗನಾ ಕರುಣದಿಂದುಳಿದಿತೆ 4

ನೀರು ಕುಡಿದು ಯಮುನೆ ಮೇಲೆ ಆಡಲು ಕೂಸುಘೋರ ಪಕ್ಷಿಯು ಬಂದು ನುಂಗಿತೆಪೋರರೆಲ್ಲರು ನೋಡಿ ಗಾಬರಿಯಾಗಲು ಮತ್ತೆಕಾರಿತವನ ಬಕ ಸೋಜಿಗವೆ 5

ಕತ್ತೆಗಳನು ಕೊಂದು ತಾಳಫಲವು ಗೋಪ-ಪುತ್ರರಿಗೆ ಉಣ್ಣ ಕೊಟ್ಟಿಹನಂತೆಚಿತ್ರಚರಿತನ ನಂದಬಾಲನ ಚರಿತೆ ಏಕಾವೃತದಿಂದಲಿ ಪೇಳಲಳವೇನೆ 6

ಕರುಗಳ ಕಾಯುತಿರಲು ವತ್ಸವೇಷದಿದುರುಳನೊಬ್ಬನು ಬಂದಿಹನಂತೆಅರಿಯದಾ ಕೂಸಿನಾ ಕಾಲ್ಪಿಡಿದುಬೆರಳ ಮರದ ಮೇಲಕ್ಕೆ ತೂರಿದನಂತೆ 7

ಏಳೇ ವರ್ಷದವ ಕೇಳೆ ಗೋವರ್ಧನಏಳು ದಿವಸ ಎತ್ತಿದನಂತೆಬಾಳುವ ಗೋಪಿಯರ ಪಾಲನೆ ಮಾಡಿದನೀಲವರ್ಣನ ಎಷ್ಟು ವರ್ಣಿಸಲೆ 8

ಬಾಲನಾದರು ನಿನ್ನ ಹಾಳು ದೈತ್ಯನ ಕೊಂದು ಬ-ಹಳ ಕುತ್ತುಗಳಿವೆ ಕೇಳಿದೇನೆಬಾಲಕರಿಬ್ಬರು ಲೋಲರಿಬ್ಬರು ನಮ್ಮ ಬಾಲಕರೇನೇ ಸ್ವರ್ಗಪಾಲನು ಇಳೆಯೊಳು ಉದಯಿಸಿದನೇ 9

ಮಂದಗಮನೆ ಎನ್ನ ಕಂದನಾಟಗಳನ್ನುಮಂದಿಯ ದೃಷ್ಟಿಯ ಭಯದಿಂದ ನಾನುಒಂದೂ ಹೇಳದೆ ಹೀಗಾನಂದ ಬಡುವೆನು ನಾನುಚಂದ್ರವದನೆ ರೋಹಿಣಿ ಕೇಳೆ 10

ಮುಂದೆ ಬಿದ್ದ ಕುರುಳು ಹಿಂದೆ ಮಾಡುತ ಗೋಪಿಕಂದನಾ ಮುದ್ದಿಸುತ್ತಿಹಳುಇಂದಿರೇಶನ ಚರಿತೆ ಒಂದೊಂದು ರೋಹಿಣಿಗೆಇಂದು ಹೇಳುತ ಗೋಪಿ ಸುಖಿಸುತಿಹಳು 11
*********