Showing posts with label ಇಂದು ಸಾರ್ಥಕವಾಯಿತು ಎನ್ನ ಜನನಾ vijaya vittala INDU SAARTHAKAVAAYITU ENNA JANANAA. Show all posts
Showing posts with label ಇಂದು ಸಾರ್ಥಕವಾಯಿತು ಎನ್ನ ಜನನಾ vijaya vittala INDU SAARTHAKAVAAYITU ENNA JANANAA. Show all posts

Tuesday, 27 October 2020

ಇಂದು ಸಾರ್ಥಕವಾಯಿತು ಎನ್ನ ಜನನಾ ankita vijaya vittala INDU SAARTHAKAVAAYITU ENNA JANANAA

Audio by Vidwan Sumukh Moudgalya

ಶ್ರೀವಿಜಯಸಾರು ಶ್ರೀರಂಗಕ್ಷೇತ್ರ ಮತ್ತು ಶ್ರೀರಂಗ ಮಹಿಮೆಯನ್ನು ತಿಳಿಸಿರುವಂತಹ ಕೃತಿ .


 ರಾಗ : ಚಾರುಕೇಶಿ 


ಇಂದು ಸಾರ್ಥಕವಾಯಿತು ಎನ್ನ ಜನನಾ

ಚಂದ್ರ ಪುಷ್ಕರಣಿಯ ವಾಸ ರಂಗನ್ನ ಕಂಡು llಪll


ಸುತ್ತೇಳು ಪ್ರಾಕಾರಗೋಪುರ ಮಹಾದ್ವಾರ

ರತ್ನದ ಕವಾಟ ತೋರಣಗಳು

ಕತ್ತಲೆ ಹರನಂತೆ ಕಣ್ಣಿಗೆ ತೋರುತಿದೆ

ತುತ್ತಿಸಲಳವೆ ಅನಂತ ಜನುಮಕೆ ll1ll


ಸಾಲು ಬೀದಿಗಳು ಒಂದೊಂದರ ಮಧ್ಯದಲಿ

ಸಾಲು ಮಂಟಪ ಮುತ್ತಿನ ಚಪ್ಪರಾ

ಕೀಲುಮಣಿಗಳಿಂದ ಬಿಗಿದ ಸೊಬಗು ಹೊಂ

ಬಾಳೆಸ್ತಂಭಗಳೆಡಬಲದಲ್ಲಿ ಒಪ್ಪಲ್ ll2ll


ಮುಂದೆ ಗರುಡಗಂಭ ಪವಳದ ಗವಾಕ್ಷಿ

ಹಿಂದೆ ನೆರೆದ ಬಲು ಪರಿಯಂಗಡಿ

ಸಂದಣಿಯಿಂದ ಭೂಸುರರು ಸ್ತೋತ್ರವ ಪೇಳೆ

ಒಂದೊಂದು ಬಗೆಯಲ್ಲಿ ವಂದಿಸುವುದು ಕಂಡು ll3ll


ಚಂದನ್ನನಿಂದೆ ಪೋಗಾಡಿದ ಸರೋವರ

ಒಂದು ಸುರವನ್ನೆ ವೃಕ್ಷದಲ್ಲಿ

ಮಿಂದು ಸಜ್ಜನರು ಕೈಗಳ ಮುಗಿದು ನಮೊ

ಎಂದು ಕೊಂಡಾಡುವರು ವೇಗದಲ್ಲಿ ll4ll


ಪ್ರಣವಾಕಾರವಾದ ವಿಮಾನ ಅದರ ಮೇಲೆ

ಮಿನುಗುವ ಸುದೇವಾದಿಗಳ

ಮನದಣಿಯ ಕೊಂಡಾಡಿ ಮುದದಿಂದ ಪಾಡುತ್ತಾ

ಫಣಿ ತಲ್ಪನಾಥ ಶ್ರೀ ಪರಮಪುರುಷನ ಕಂಡು ll5ll


ಕಮನೆಯ ಮುಕುಟ ಕಸ್ತೂರಿ ತಿಲಕ ನಾಶಿಕ

ಕಮಲಾಕ್ಷ ಕುಳಿರತೆರದಿ ಕದಪು

ಅಮಲಗೂದಲು ಕರ್ಣ ಕುಂಡಲ ಉರದಲ್ಲಿ

ರಮಣಿ ಕೌಸ್ತುಭ ಹಾರ ಪದಕ ಪಾವನ ಪಾದಾ ll6ll


ನಸುನಗೆ ಚತುರ್ದಶ ಲೋಕವ

ಬಿಸಜ ಕರಗಳು ಭೂಷಣದಿಂದಲಿ

ಬಿಸಜ ಭವನ ಪಡೆದು ನಾಭಿ ವಸನಕಟಿ

ಮಿಸುಣಿಪ ವಡ್ಯಾಣ ಸರ್ವ ಲಕ್ಷಣನಾ ll7ll


ಕಾಲ ಕಡಗ ಪೆಂಡೆ ಪೊಂಗೆಜ್ಜೆ ಅಂದಿಗೆ

ವಾಲಾಯ ಪದತಳದಲಿ ರೇಖೆ

ವಾಲಗ ಸಿರಿದೇವಿ ಪ್ರೀತಿಯಿಂದಲೆ ಮಾಡೆ

ಕಾಲಕಾಲಕೆ ಸುರರು ಸಮ್ಮುಖದಲಿ ನುತಿಸೆ ll8ll


ಉಭಯ ಕಾವೇರಿ ನಡುವೆಯಿದ್ದು ದಕ್ಷಿಣ

ಅಭಿಮುಖವಾಗಿ ಪವಡಿಸಿದ ವಿ

ಭೀಷಣದ ವರದ ರಂಗ ಮಂದಿರ ನಿಲಯಾ

ವಿಬುಧೇಶ ವಿಜಯವಿಠ್ಠಲ ರಂಗನ ಕಂಡು ll9ll

*******