Showing posts with label ಮುಸುಕು ತೆಗೆದರೆ ಬೆನ್ನಲ ನಾಲಗೆ ಇದರ purandara vittala. Show all posts
Showing posts with label ಮುಸುಕು ತೆಗೆದರೆ ಬೆನ್ನಲ ನಾಲಗೆ ಇದರ purandara vittala. Show all posts

Thursday 5 December 2019

ಮುಸುಕು ತೆಗೆದರೆ ಬೆನ್ನಲ ನಾಲಗೆ ಇದರ purandara vittala

ಪುರಂದರದಾಸರು
ರಾಗ ಮುಖಾರಿ. ಆದಿ ತಾಳ 

ಮುಸುಕ ತೆಗೆದರೆ ಬೆನ್ನಿಲಿ ನಾಲಿಗೆ , ಇದರ
ಹೆಸರು ಬಲ್ಲವರುಂಟೆ ಪೇಳಿ ರಂಗಯ್ಯ

ಸತ್ತಿಗೆ ತಲೆಯವಳು ನೆತ್ತಿಲಿ ಬಾಲದವಳು
ಕತ್ತಿನ ಕೆಳಗೆ ಕಪ್ಪಿನ ಕೊಪ್ಪಿನವಳು
ಸುತ್ತೇಳು ಮೈಗೆರಡು ಜೋಡು ಭಂಗಾರದ
ಸೃಷ್ಟಿಯೊಳಗೆ ಇದರ ಹೆಸರು ಬಲ್ಲವರುಂಟೆ

ಜಡೆ ಮೆರಗುವ ಬಾಲೆ ಒಡಲೊಳು ಕರುಳಿಲ್ಲ
ಬಿಡದೆ ಪಟ್ಟಾವಳಿಯುಟ್ಟು ಬಲ್ಲವಳು
ಅಡವಿಯೊಳಗೆ ಪುಟ್ಟಿ ಪಡೆದಳು ದೇಹವ
ಪೊಡವಿಯೊಳಗೆ ಇದರ ಹೆಸರು ಬಲ್ಲವರುಂಟೆ

ಬೇರಾಗಿ ಬೆರಳೈದು ಮೂರು ತಾನೊಂದಾಗಿ
ಯಾರು ಕಂಡರು ಎಂದು ನಸು ನಗುತ
ಸೇರಿದ ಭಕುತರ ಪೊರೆವ ರಂಗಯ್ಯನ
ಸೇರಿ ಮೆಚ್ಚಿಸಿಕೊಳ್ಳೆ ಪುರಂದರ ವಿಠಲನ
***

pallavi

musukha tegedare bennili nAlige idhara hesaru ballavaruNTe pELi rangayya

caraNam 1

sattige taleyavaLu nettili bAladavaLu kattina keLage kappina koppinavaLu
suttELu maikeraDu jODu bhangArada shrSTiyoLage idhara hesaru ballavaruNTe

caraNam 2

jade maraguva bAle oDaloLu karuLilla biDade paTTAvaLIyuTTu ballavaLu
aDaviyoLage puTTi paDedaLu dEhava poDaviyoLage idhara hesaru ballavaruNTe

caraNam 3

pErAgi beraLaidu mUru tAnondAgi yAru kaNDaru endu nasu naguta
sErida bhakutara poreva rangayyana sEri meccisi koLLe purandara viTTalana
***

ಮುಸುಕು ತೆಗೆದರೆ ಬೆನ್ನಲ ನಾಲಗೆ 
ಇದರ ಹೆಸರು ಬಲ್ಲವರುಂಟೆ ಪೇಳಿರಿ ಜನರೆ ಪ.

ಸತ್ತಿಗೆ ತಲೆಯವಳು ನೆತ್ತಿಲಿ ಬಾಲದವಳುಕತ್ತಿನ ಕೆಳಗೆ ಕಪ್ಪಿನ ಕೊಪ್ಪಿನವಳುಸುತ್ತೇಳು ಮೈಗೆರಡು ಜೋಡು ಬಂಗಾರಸೃಷ್ಟಿಯೊಳಗೆ ಇದರ ಹೆಸರ ಬಲ್ಲವರುಂಟೆ 1

ಜಡೆ ಮೆರಗುವ ಬಾಲೆ ಒಡಲೊಳಗೆ ಕರುಳಿಲ್ಲಬಿಡದೆ ಪಟ್ಟಾವಳಿಯುಟ್ಟು ಬಲ್ಲವಳುಅಡವಿಯೊಳಗೆ ಪುಟ್ಟಿ ಪಡೆದಳು ದೇಹವಪೊಡವಿಯೊಳಗೆ ಇದರ ಹೆಸರು ಬಲ್ಲವರುಂಟೆ 2

ಬೇರಾಗಿ ಬೆರಳೈದು ಮೂರು ತಾನೊಂದಾಗಿಯಾರು ಕಂಡರು ಎಂದು ನಸುನಗುತಸೇರಿದ ಭಕುತರ ಪೊರೆವ ರಂಗಯ್ಯನಸೇರಿ ಮೆಚ್ಚಿಸಿಕೊಳ್ಳೊ ಪುರಂದರವಿಠಲ 3
*********