ಮೆರೆದೆ ಮಹಿಮೆ ಉದಾರ ನಮ್ಮಗುರು ಭೀಮಸೇನ ಸುಧೀರ ಪ.
ಮಂಗಳ ಮಹಿಮ ವಿಹಾರ ಮಾಯವಾದಿಗಳಿಗತಿ ಕ್ರೂರ ಅ.ಪ.
ಹರಿಯ[ನಿರೂಪ] ವ ಧರಿಸಿ ಮರುತ ಕುಂತಿಯೊಳವತರಿಸಿಹರನೊಳು ವಾದಿಸಿ ಜೈಸಿ ಹರಿಸರ್ವೋತ್ತಮನೆಂದೆನಿಸಿ 1
ಬಕ ಹಿಡಿಂಬಕ ಕೀಚಕ ಜರಾಸುತರ ಮಣಿಮಂತ ಕೀಚಕ ದುರ್ಜನರಸಕಲ ಕೌರವ ಅತಿರಥರ ಕೊಂದು ಸುಖಪಡಿಸಿದೆ ಸಹೋದರರ 2
ಜ್ಞಾನಭಕುತಿಸಂಪನ್ನ ಅಜ್ಞಾನಾರಣ್ಯಛೇದನ ಮುದ್ದುಜ್ಞಾನೇಂದ್ರ ಹಯವದನನ್ನ ಧ್ಯಾನದೊಳಿರಿಸು ಪ್ರಸನ್ನ 3
***