ರಚನೆ :
" ಶ್ರೀ ಲಕುಮೀಶಾಂಕಿತ " ಶ್ರೀ ಕುರುಡಿ ರಾಘವೇಂದ್ರಾಚಾರ್ಯರು., ಮಂತ್ರಾಲಯ
ಧಾಟಿ : - ಯಾವ ರೀತಿಯಿಂದ ನೀ ಯೆನ್ನ ಸಲಹುವಿ
ಶ್ರೀ ವಿದ್ಯಾಧಿರಾಜರ
ಶ್ರೀವಾರಿಜಾಂಘ್ರಿಗಳ ।
ಭಾವಶುದ್ಧಿಲಿ ಭಜಿಸೋ ।। ಪಲ್ಲವಿ ।।
ಠಾವಾಗಿದ್ದ ಭವದ ನೋವ -
ಸಾಸಿರ ಕಳೆದು ।
ಕೋವಿದನ ಮಾಡಿ । ಶ್ರೀ ।
ಗೋವ ಕಾವನ ತೋರ್ಪ ।। ಅ ಪ ।।
ರಾಜಿಸುವ ವೇದಾಂತ ।
ರಾಜ್ಯಕೆ ಜಯತೀರ್ಥರು ।
ಮೊಜಿಲಿ ಇವರಿಗೆ ಆಶ್ರಮ-
ನೀಡಿ ಮೂಲ - ।
ಶ್ರೀ ಜಾನಕೀಶಾದಿ -
ಮೂರ್ತಿಗಳನೆ ಕೊಡೆ ।
ಪೂಜಾದಿಯಲಿ ಆದಿ ।
ತೇಜದಿ ಮೆರೆವಂಥ ।। ಚರಣ ।।
ವಿಧಿ ಭಾವಿ ಶಾಸ್ತ್ರಕೆ -
ಗುರು ಗೈದ ಟೀಕಾದಿ ।
ವಿಧಿ ಸೂತ್ರ ಭಾಷ್ಯ -
ಸುಧಾಧಿಗಳ ಅರಿತೂ ।
ಅಧಮ ಮತದವರನ್ನು-
ವಾಗ್ಯುದ್ಧದಲಿ ಗೆದ್ದು ।
ಒದಗಿದ ಜ್ಞಾನ ಮತಕೆ ।
ಬುಧ - ರವಿಯಂತೆ
ಬೆಳಗಿದ ।। ಚರಣ ।।
ಮುಕುತಿ ಮಾರ್ಗಕೆ ಇವರು ।
ಸಕಲ ಶ್ರೀ ಉಪದೇಶ ।
ಸುಖಮುನಿ ಶಾಸ್ತ್ರವೆಂದು -
ಡಂಗುರದಲಿ ಸಾರುತ ।
ಸುಕವೀಂದ್ರರಿಗೆ
ವೇದಾಂತದಲಿ ಕಟ್ಟಿ ।
ಲಕುಮೀಶನ ಧ್ಯಾನದಿ-
ಯರಗೋಳದಲಿ ನಿಂತ ।। ಚರಣ ।।
****