Showing posts with label ಆರು ಹಿತವರು ನಿಮಗೆ ಈ ಮೂವರೊಳಗೆ purandara vittala. Show all posts
Showing posts with label ಆರು ಹಿತವರು ನಿಮಗೆ ಈ ಮೂವರೊಳಗೆ purandara vittala. Show all posts

Tuesday, 3 December 2019

ಆರು ಹಿತವರು ನಿಮಗೆ ಈ ಮೂವರೊಳಗೆ purandara vittala

ಪುರಂದರದಾಸರು
ರಾಗ ಮುಖಾರಿ ಝಂಪೆತಾಳ

ಆರು ಹಿತವರು ನಿಮಗೆ ಈ ಮೂವರೊಳಗೆ ?
ನಾರಿಯೊ ಧಾರಿಣಿಯೊ ಬಲುಭವದ ಸಿರಿಯೊ ? ||

ಅನ್ಯರಲಿ ಜನಿಸಿರ್ದ ಅಂಗನೆಯ ಕರೆತಂದು
ತನ್ನ ಮನೆಗವಳ ಯಜಮಾನಿಯೆನಿಸಿ
ಭಿನ್ನವಲ್ಲದಲರ್ಧ ದೇಹವೆನಿಸುವ ಸತಿಯು
ಕಣ್ಣಿನಲಿ ನೋಡಲಮ್ಮಳು ಕಾಲವಶದಿ ||

ಮುನ್ನ ಶತಕೋಟಿ ರಾಯರುಗಳಾಳಿದ ನೆಲವ
ತನ್ನದೆಂದೆನುತ ಶಾಸನವ ಬರೆಸಿ
ಬಿನ್ನಣದ ಮನೆಕಟ್ಟಿ ಕೋಟೆ ಕೊತ್ತಳವಿಕ್ಕಿ
ಚೆನ್ನಿಗನಸುವಳಿಯೆ ಹೊರಗೆ ಹಾಕುವರು ||

ಉದ್ಯೋಗ ವ್ಯವಹರ ನೃಪಸೇವೆ ಕುಶಲಗತಿ
ಕ್ಷುದ್ರತನ ಕಳವು ಪರದ್ರೋಹದಿಂದ
ಬುದ್ಧಿಯಿಂದಲೆ ಗಳಿಸಿ ಸಿಕ್ಕಿದಂಥರ್ಥವನು
ಸದ್ಯದಲ್ಲಾರು ಉಂಬುವರು ಹೇಳು ಮನುಜ ||

ಶೋಕವನು ಗೈಯುವರು ಸತಿಸುತರು ಬಾಂಧವರು
ಜೋಕೆ ತಪ್ಪಿದ ಬಳಿಕ ಅರ್ಥ ವ್ಯರ್ಥ
ಲೋಕದೊಳು ಗಳಿಸಿದ ಪುಣ್ಯಪಾಪಗಳೆರಡು
ಸಾಕಾರವಾಗಿ ಸಂಗಡ ಬಾಹೋದಲ್ಲದೆ ||

ಅಸ್ಥಿರದ ದೇವನು ನೆಚ್ಚಿ ನಂಬಲು ಬೇಡ
ಸ್ವಸ್ಥದಲಿ ನೆನೆ ಕಂಡ್ಯ ಹರಿಪಾದವ
ಚಿತ್ತದೊಳು ಶುದ್ಧಿಯಿಂ ಪುರಂದರವಿಠಲನೇ
ಉತ್ತಮೋತ್ತಮನೆಂದು ಸುಖಿಯಾಗು ಮನುಜ ||
***

pallavi

Aru hitavaru ninage mUru mandigaLOLage nAriyO dhAriNiyo balu dhanada siriyo

caraNam 1

anyarali janisirda anganeya karetandu tanna manegavaLa yajamAni yenisi
bhinnavilladalardha dEhavenisuva satiyu kaNNinali nODalammaLu kAlavashadi

caraNam 2

munna shata kOTi rAyarugaLALida nelava tannadendenuta shAsanava baresi
binnaNada mane kaTTi kODe kottaLavikki cenniganasuvaLiye horage hAkuvaru

caraNam 3

udyOga vyavahAra nrpa sEve kushalagati kSatra tana kaLavu para drOhadinda
buddhiyidale gaLisi sikkidantharttavanu satyadallAru umbuvar hELu manuja

caraNam 4

shOkavanu geyyuvaru sati sutaru bAndhavaru jOke tappida baLIga artta vyartta
lOkadoLu gaLisirda puNya pApagaLeraDu sAkAravAgi sankaTa bAhOdallade

caraNam 5

asthirada dEhavanu necci nambira bEDa svasthadali nene kaNDya hari pAdava
cittadoLu suddhiyim purandara viTTalane uttamOttamanendu sukhiyAgu manuja
***

ಆರು ಹಿತವರು ಮನವೆ ಮೂರು ಮಂದಿಗಳೊಳಗೆ
ನಾರಿಯೋ ಧಾರಿಣೀಯೊಧನದಬಲು ಸಿರಿಯೊ ?ಪ.

ಅನ್ಯರಲಿ ಜನಿಸಿರ್ದ ಅಂಗನೆಯ ಕರೆತಂದುತನ್ನ ಮನೆಯಲ್ಲಿ ಯಜಮಾನಿಯೆನಿಸಿಭಿನ್ನವಿಲ್ಲದೆ ಅರ್ಧ ದೇಹವೆನಿಸುವ ಸತಿಯುಕಣ್ಣಿನಲಿ ನೋಡಲಂಜುವಳು ಕಾಲನೊಯ್ವಾಗ 1

ಮುನ್ನ ಶತಕೋಟಿ ರಾಯರುಗಳಾಳಿದ ನೆಲನತನ್ನದೆಂದು ಶಿಲೆಯ ಶಾಸನವ ಬರೆಸಿಬಿನ್ನಾಣದಿ ಮನೆಗಟ್ಟಿ ಕೋಟೆ - ಕೊತ್ತಳಿವಿಕ್ಕಿಚೆನ್ನಿಗನೆ ಅಸುವಳಿಯ ಊರ ಹೊರಗಿಕ್ಕುವರು 2

ಉದ್ಯೋಗ - ವ್ಯವಹಾರ ನೃಪಸೇವೆ ಮೊದಲಾಗಿಕ್ಷುದ್ರತನ ಕಳವು ಪರದ್ರೋಹದಿಂದಬುದ್ಧಿಯಿಂದಲಿ ಧನವ ಗಳಿಸಿಕ್ಕಿ ಅಸುವಳಿಯಸದ್ಯದಲಿ ಆರುಂಬವರು ಹೇಳು ಮನುಜಾ 3

ಶೋಕಗೈದಳುವವರುಸತಿ - ಸುತರು ಭಾಂದವರುಜೋಕೆ ತಪ್ಪಿದ ಬಳಿಕ ಅರ್ಥವ್ಯರ್ಥಲೋಕದಲಿ ಸ್ಥಿರವಾದ ಕೀರ್ತಿ ಅಪಕೀರ್ತಿಗಳುಸಾಕಾರವಾಗಿ ಸಂಗಡ ಬಾಹುವಲ್ಲದೇ ? 4

ಅಸ್ಥಿರದ ದೇಹವನು ನೆಚ್ಚಿ ನೀ ಕೆಡಬೇಡಸ್ವಸ್ಥದಲಿ ನೆನೆಕಾಣೊ ಪರಮಾತ್ಮನಚಿತ್ತಶುದ್ದಿಯಲಿ ಶ್ರೀ ಪುರಂದರವಿಠಲನಭಕ್ತಿಯಿಂದಲಿ ನೆನೆದು ಮುಕ್ತಿಪಡೆ ಮನವೆ 5
*******