Showing posts with label ಚೇತರಿಸಾಲೊಲ್ಲೆಯಾ ಮನಪಾತಕ ನಿದ್ರೆ ಭರದಿಂ sirigovinda vittala. Show all posts
Showing posts with label ಚೇತರಿಸಾಲೊಲ್ಲೆಯಾ ಮನಪಾತಕ ನಿದ್ರೆ ಭರದಿಂ sirigovinda vittala. Show all posts

Monday, 2 August 2021

ಚೇತರಿಸಾಲೊಲ್ಲೆಯಾ ಮನಪಾತಕ ನಿದ್ರೆ ಭರದಿಂ ankita sirigovinda vittala

ಚೇತರಿಸಾಲೊಲ್ಲೆಯಾ ಮನಪಾತಕ ನಿದ್ರೆ ಭರದಿಂ ಪ


ಮಲಮಯ ಕಾಯದಾ ಹೊಲಸು ಹಸಿವಿತ್ರಿಷಿ

ಛಲಮದ ರÉೂೀಗಗಳಾ

ಕುಲಗೆಡಿಸುವ ಆಶಾದಿಗಳಳಿಯದೆ

ಮಲಗುವರೆ ಮಹನೀಯರ ತೆರದಿ 1


ದಾರಾತನು ಬಲಹೀರುತ ಮಾಯವ

ಬೀರುತಲಾತ್ಮಜರು ದಾರಿದ್ರ್ಯದ ದಾವಾನಳ ಸುಡುತಿರೆ

ನಾರದರೋಲ್ ನಿಶ್ಚಿಂತನಾಗಿ 2


ಶಿರಿಗೋವಿಂದ ವಿಠಲ ಮೊರೆ ಪೊಕ್ಕರೆ

ಪೊರೆಯುವನೆಂದು ಅಭಯಾ

ವರಭುಜಗಳು ನಾಭಾಯತ್ತಿನಿಂದಿರಲು

ಸುರ ಅರಿಗಳ ತೆರೆ ಹೊರಳೂರಗದಾ 3

****