..
ಕರುಣಿಸಯ್ಯಾ ಕಂಜಜನಯ್ಯಾ | ಕರ್ಣರಹಿತ ಶಯ್ಯಾ ಕನಕಾದ್ರಿರಾಯಾ ಪ
ಕರಿವರದನೆ ನಿನ್ನ ಚರಣ ನಂಬಿದೆ ಎನ್ನಪರಿಪಾಲಿಸುವದು ಪರಮ ಕೃಪಾಳೊ ಅ.ಪ.
ಕೋಟಲೆ ಸಂಸಾರವೆಂಬೊ | ನೀಟು ಶರಧಿಯನ್ನುದಾಟಲಾರೆನೊ ನಾನೂ | ಇದೇನೊ ||ನಾಟಕಾಧಾರ ನಿನ್ನ | ನಂಬಿದಾ ಮೇಲೆ ಎನ್ನಬೂಟಕನೆನಸುವರೇ | ಮುರಾರೇ ||ಹಾಟಕಾಂಬರ ಧರ ಹರಿಯೇ ಕೇಳ್ವುದಿನ್ನು | ಕೋಟಿ ವ್ಯಾಳೆಗೆ ಭಕ್ತ ಕೋಟಿಯೊಳಗಿಟ್ಟು ಎನ್ನ | ನೀಟು ಮಾರ್ಗವ ತೋರಿ ಪಾಟುಪಡಿಪ ಯಮಕಾಟ ಕಳೆದು ದಿವ್ಯ ನೋಟದಿ ನೋಡು 1
ಆರರ್ಧ ಗುಣದಿಂದ | ಆರು ಅರಿಗಳಿಂದಆರೆರಡು ಮದದಿಂದಾ | ಆನಂದಾ ||ಆರು ಮೂರು ಕಾಣದೆ | ಆರು ನಾಲ್ಕು ತಿಳಿಯದೆಆರೈದು ನಿಲ್ಲಿಸದೆ | ಹೀಗಾದೇ ||ಆರರ ಸೇವಿಸಲಾರದೆ ನಿನ್ನ ಪದಾರವಿಂದವ ಸರ್ವದ ಸೇರದೇ ಆರೆಂದು ಎನ್ನ ನೀ ದೂರ ನೋಡದೆ ಬಲುಸಾರೆಗರಿಯೋ ಕಂಸಾರಿ ಮುರಾರಿ2
ತಂದೆ ಯೆನಗೆ ನೀನೇ | ಇಂದಿರೆ ಜನನಿ ಗೋ-ವಿಂದ ಇನ್ನೊಬ್ಬರಿಲ್ಲ | ನೀ ಬಲ್ಲೆಲ್ಲಾ ||ಸುಂದರ ವಿಗ್ರಹನೆ | ಸುಗುಣ ಸಾಕಾರ ಶುಭಸಾಂದ್ರಾ ಭಕುತ ವತ್ಸಲ | ಗೋಪಾಲಾ ||ಎಂದೆಂದಿಗೆ ಎನ್ನಿಂದ ಅಗಲದೆ ಮುಕುಂದ ಮುನಿ ವೃಂದವಂದಿತ ಚರಣನೇ | ಸಿಂಧುಶಯನ ಶಿರಿ ಮೋಹನ ವಿಠಲ ಬಾ ಲೇಂದು ವದನ ಸುಗುಣ ಸಾಂದ್ರಾ ಉಪೇಂದ್ರಾ 3
***