ಶ್ರೀ ಸತ್ಯಜ್ಞಾನರು
satyajnana teertharu 1911 rajahmundry matha uttaradi mutt yati 37 magha shukla ekadashi ಸತ್ಯಜ್ಞಾನ ತೀರ್ಥರು
ಎಂಥಾದು ನಮ್ಮ ಗುರುಗಳ ಪಾದ ಕಂತುಪಿತನ ದಿವ್ಯಪಾದಾ
ಅಂತಕನ ಭಯ ಬಿಡಿಸುವಾ ಪಾದ ಸಂತೋಷವ
ಕೊಡುವಂಥ ಪಾದಾ ಪ
ಬೇಡಿದ ವರ ನೀಡಿದಾ ಪಾದ ಮೂಢಮತಿಯನ್ನು
ಬಿಡಿಸುವ ಪಾದಾ
ಬ್ಯಾಡಾದವರಲ್ಲಿ ಮುರಿಯುವ ಪಾದಾ ಪೊಡವಿಯ
ಪಾವನ ಮಾಡ್ವ ಪಾದಾ 1
ನಿತ್ಯ ಸುಖವನ್ನು ಕೊಡಿಸುವ ಪಾದಾ ಮಿಥ್ಯಾಸುಖವನ್ನು
ಬಿಡಿಸುವ ಪಾದಾ
ಭಕ್ತ ಜನರಿಗೆ ಭಾಗ್ಯದ ಪಾದಾ ಸತ್ಯಜ್ಞಾನಾನಂದರ ದಿವ್ಯ ಪಾದಾ 2
ಧೀರ ಹನುಮೇಶವಿಠಲನ ಪಾದಾ ಅರ್ಚಿಸಲು
ತುಳಸಿಯ ತಂದ ಪಾದಾ
ಜರಿದು ಷಡ್ವೈರಿಗಳ ಗೆದ್ದ ಪಾದಾ ಪರಮ ಮಂಗಳಕರವಾದ ಪಾದಾ 3
****