..
Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane
ಬೆದರದಿರು ಚಿನ್ನಾ ನೀ ಬೆದರದಿರು ಪ
ಸದಯ ಸುಹೃದಯದಿ ಒದಗಿ ಸಂ -
ಮ್ಮುದವನಿತ್ತು ವಿಪದವ ಕಳೆವನು ಅ.ಪ
ಆದಿಯಲಿ ಬೆದರಿಸಿ ಮನದ ಹದುಳವ ನೋಡುವ
ಪದವಿ ಪೊಗಿಪÀ ಸಂಪದವೀಯನಿವನು 1
ಒಂದೆ ಮನದಿ ಗೋವಿಂದನ ಪದ ನಂಬು
ಹಿಂದಾಗುವುದು ಚಿಂತೆ ಮುಂದುಳಿಯದು 2
ಎಂದೆಂದು ಇಂದಿರೆ ಅರಸ ವಿಜಯ ರಾಮ-
ಚಂದ್ರವಿಠಲ ನಿನ್ನ ಬೆನ್ಹಿಂದೆ ಇರುವನು 3
***