Showing posts with label ಬಾರೋ ಶ್ರೀವೆಂಕಟರಮಣ ತವಪಾದಾರಾಧಕರನು karpara narahari. Show all posts
Showing posts with label ಬಾರೋ ಶ್ರೀವೆಂಕಟರಮಣ ತವಪಾದಾರಾಧಕರನು karpara narahari. Show all posts

Monday, 2 August 2021

ಬಾರೋ ಶ್ರೀವೆಂಕಟರಮಣ ತವಪಾದಾರಾಧಕರನು ankita karpara narahari

ಬಾರೊ ಶ್ರೀವೆಂಕಟರಮಣ ತವಪಾ-

ದಾರಾಧಕರನು ಪೊರೆಯಲು ಕರುಣಾಪೂರ್ಣ ಪ


ಬಾರೋ ನಮಿಸುವೆ ಪೂರ್ಣ ಕೃಷ್ಣಾ

ತೀರದಲಿ ಮಾಂಡವ್ಯ ಋಷಿಗಳ

ಘೋರ ತಪಸಿಗೆ ಒಲಿದು ಗುಡೆಬಲ್ಲೂರು

ಮಂದಿರನೆಂದು ಕರೆಸುತ ಅ.ಪ


ಎಲ್ಲ ಕಡೆಗೆ ನೆಲೆಸಿರುವ ಸಿರಿ

ನಲ್ಲನೊಲಿಸಲು ತಪವನು ಗೈವ

ಬಲ್ಲಿದ ಮಾಂಡವ್ಯರಿರವ ಕಂಡು

ಗೊಲ್ಲರು ಮಾಡಿದರನು ದಿನ ಶೇವಾ

ಪುಲ್ಲನಾಭನು ದರುಶನವ ಮುನಿ

ವಲ್ಲಭಗೆ ತೋರಿಸಲು ಬೇಡಿದ

ಗೊಲ್ಲರೆನ್ನಯ ಭಕುತರವರಿಂದಲ್ಲಿ

ಪೂಜೆಯಗೊಳ್ವದೆಂದನು 1


ಬಾರೊ ಬೇಗನೆ ದ್ವಿಜರಾಜ ಧ್ವಜ

ವೇರಿ ಪೊರೆದೆಯೊ ಬಂದು ಕರಿಯೆ ಕರಿ

ರಾಜ ತೋರೋ ಚವತರಣ ಸರೋಜಯುಗ್ಮ

ಸಾರಿ ಭಜಿಸುವ ಭಕುತರ ಕಲ್ಪ ಭೂಜ

ಮಾರಜನಕನೆ ಚಾರುಕನಕ ಕಿ

ರೀಟ ಕುಂಡಲಹಾರಪದಕ ಕೇಯೂರ ಸಾಲಂ-

ಕಾರ ವಪು ಶೃಂಗಾರದಲಿ ರಥವೇರಿ ಮೆರೆಯುತ 2


ವೇದವೇದ್ಯನೆ ನಿನ್ನ ಪ್ರೇಮಾ ಪಡೆದ

ಪಾದ ಮಹಿಮೆಯ ವರ್ಣಿಸಿದ

ದೇವ ಶರ್ಮಾ ಬೋಧಾದಿ ಸದ್ಗುಣಧಾಮ ಪಾಹಿ

ಮೇದಿನಿ ವಿಬುಧ ಪೂಜಿತ ಪೂರ್ಣಕಾಮ

ಮೇದಿನಿಯೊಳು ಶ್ರೀದ ನಿನ್ನಯ

ಪಾದಯುಗಳವ ಕಂಡು ಹರುಷದಿ

ಪಾದುಕೆಯ ರಚಿಸಿದಗೆ ಒಲಿದ

ಅಗಾಧ ಮಹಿಮನೆ ಮೋದಗರೆಯಲು 3


ಒಂದಿನ ನಿಶಿಯೊಳುತ್ಸವದಿ ದಣಿ

ದಂದು ಮಲಗಿರಲರ್ಚಕರು ದೇವಾಲಯದಿ

ಬಂದು ಚೋರರು ಅತಿಜವದಿ ನಿನಗೆ

ಪೊಂದಿಸಿದೊಡವೆ ಗಳನು ಚೌರ್ಯತನದಿ

ಮಂದ ಮತಿಗಳು ಒಯ್ಯುತಿರೆ ಖಳ

ವೃಂದಕಂಗಳು ಪೋಗೆ ತುತಿಸಲು

ಚಂದದಿಂ ಬರೆ ಹೇಮನಾಮವ

ಕುಂದದಲೆ ಮಾಡಿಸಿದರಾಕ್ಷಣ 4


ನೀರಜಾಸನ ಮುಖ್ಯ ತ್ರಿದಶ ಗಣದಿಂ-

ದಾರಾಧಿತಾಂಘ್ರಿ ಪಂಕಜ ಭಕ್ತಪೋಷ

ಸೂರಿಜನರ ಸಹವಾಸ ಕೊಡು

ಧಾರುಣಿಯೊಳು ಕೃಷ್ಣ ತೀರನಿವಾಸ

ಬಾರೊ ನಿನ್ನನು ಶೇರಿದವರW

ವಾರಿವಾಹ ಸಮೀರ ಕಾರ್ಪರ

ನಾರ ಶಿಂಹಾತ್ಮಕನೆ ಯನ್ನಯ

ಘೋರ ಭವ ಭಯ ದೂರಮಾಡಲು 5

****