Showing posts with label ಎಷ್ಟು ಪೊಗಳಲಿ ನಾನು ಎನ್ನೊಡೆಯ ನಿಮ್ಮ ವಿಶಿಷ್ಟ ಮಹಿಮೆಗಳನು neleyadikeshava. Show all posts
Showing posts with label ಎಷ್ಟು ಪೊಗಳಲಿ ನಾನು ಎನ್ನೊಡೆಯ ನಿಮ್ಮ ವಿಶಿಷ್ಟ ಮಹಿಮೆಗಳನು neleyadikeshava. Show all posts

Wednesday, 1 September 2021

ಎಷ್ಟು ಪೊಗಳಲಿ ನಾನು ಎನ್ನೊಡೆಯ ನಿಮ್ಮ ವಿಶಿಷ್ಟ ಮಹಿಮೆಗಳನು ankita neleyadikeshava

 ..

ಎಷ್ಟು ಪೊಗಳಲಿ ನಾನು ಎನ್ನೊಡೆಯ ನಿಮ್ಮ ವಿ- ಶಿಷ್ಟ ಮಹಿಮೆಗಳನು ಸುಜನರಿಗೆ ಬಂದ ಕಷ್ಟವಳಿಯಲ್ಕೆ ನೀ ಸುರಕಾಮಧೇನು ಪ


ವಿಷ್ಣುವೆ ಪರಮದೈವವೆಂದು ದುಷ್ಟ ರಾಕ್ಷಸರ ಕೊಂದೆ ಸೃಷ್ಟಿಸಿ ಪಾಲಿಪ ಶ್ರೀರಾಮರ ಇಷ್ಟ ಭಕ್ತರೊಳು ಶ್ರೇಷ್ಠನೆಂದೆನಿಸಿದೆ ಅ


ತಾಯಿಯಪ್ಪಣೆಗೊಂಡು ಸೇವೆಗೆ ರಘುಪತಿ ರಾಯನಲ್ಲಿ ನಿಂದು ತನ್ನಾತ್ಮ ಸುಖ ಬಯಸೆನೆಂದು ಶ್ರೀ ಹರಿಗೆ ನುಡಿದುಕಾಯಬೇಕು ಸುಗ್ರೀವನನೆನುತಲಿ ತೋಯಜಾಕ್ಷಗೆ ಪೇಳಿ ವಾಲಿಯನು ಪಾಯದಿಂದಲಿ ಕೊಲ್ಲಿಸಿ ರವಿಜಗೆ ಸ- ಹಾಯ ಮಾಡಿದೆ ವಾಯುತನಯ1


ಕಡಲ ಬೇಗನೆ ಹಾರಿ ಶ್ರೀರಾಮರ ಮಡದಿಗುಂಗುರವ ಕೊಟ್ಟು ಅಲ್ಲಿದ್ದ ದನುಜರ ಹೊಡೆದು ಬಲು ಹಂತಕಾರಿ ಮಾಡಿದೆ ಶೌರಿ ಒಡೆಯಗೆ ವಾರ್ತೆಯ ಪೇಳಿ ಶೀಘ್ರದಿ ನಡೆಸಿ ಸೈನ್ಯವ ದಶಮುಖನ ಶಿರವ ನೊಡಿಸಿದಾಕ್ಷಣ ಲೋಕಮಾತೆಯ ನೊಡಗೂಡಿಸಿದೆ ಶ್ರೀವಾಸುದೇವರಿಗೆ 2


ಮೂರು ರೂಪವ ತಾಳಿ ಮಹಾಯೋಗ್ಯರುಗಳಿಗೆ ಸಾರ ತತ್ತ್ವವ ಪೇಳ್ದೆ ಶರಣು ಹೊಕ್ಕ ಮನುಜರ ಘೋರ ದುರಿತವ ಸೀಳ್ದೆ ಧೀರ ತನು ಧುರದುಂಡಿ ಹನುಮಯ್ಯರಿಂ ಸೇವಿಸಿದ ನಿಮ್ಮಂಘ್ರಿ ಕಮಲವದೂರ ಮಾಡದೆ ಎನ್ನ ಸಲಹಯ್ಯ ಕರುಣಾವಾರಿಧಿ ಕಾಗಿನೆಲೆಯಾದಿಕೇಶವ ಮುತ್ತತ್ತಿ ದೊರೆಯೆ3

***