Showing posts with label ನಾನೇನ ಮಾಡಿದೆ ತಪ್ಪುಗಳನ್ನ ನಾನೇನ ಮಾಡಿದೆ ದೇವರದೇವ rajesha hayamukha. Show all posts
Showing posts with label ನಾನೇನ ಮಾಡಿದೆ ತಪ್ಪುಗಳನ್ನ ನಾನೇನ ಮಾಡಿದೆ ದೇವರದೇವ rajesha hayamukha. Show all posts

Thursday, 5 August 2021

ನಾನೇನ ಮಾಡಿದೆ ತಪ್ಪುಗಳನ್ನ ನಾನೇನ ಮಾಡಿದೆ ದೇವರದೇವ ankita rajesha hayamukha

 ..

kruti by ವಿಶ್ವೇಂದ್ರತೀರ್ಥರು vishwendra teertharu sode mutt


ನಾನೇನ ಮಾಡಿದೆ ತಪ್ಪುಗಳನ್ನ

ನಾನೇನ ಮಾಡಿದೆ ದೇವರದೇವ ಪ


ನಿನ್ನ ದಾಸರ ತಪ್ಪನೆಣಿಸದೆ ಪೊರೆಯುವೆ

ನಾನೊಬ್ಬ ದಾಸನೆಂದರಿದು ನೀ ಪೊರೆಯೊ 1


ಭೃಗುವಂತೆ ನಿನ್ನಯ ಎದೆಗೆ ತುಳಿಯಲಿಲ್ಲ

ನಗವೈರಿಯಂತೆ ಯುದ್ಧವ ಮಾಡಲಿಲ್ಲ 2


ಅಂಗಾಧಿಪತಿಯಂತೆ ಕೊಂದೆನೆಂದರಿತಿಲ್ಲ

ಗಂಗೆಯ ಸುತನಂತೆ ಫಣಿಗೆ ಹೊಡೆಯಲಿಲ್ಲ 3


ನಿನ್ನಣ್ಣನಂತೆ ನೀ ವಂಚಿಸಿದೆಯೆಂದು

ನಿನ್ನ ಬಿಟ್ಟನ್ಯ ದೇಶಕೆ ಪೋಗಲಿಲ್ಲಾ 4


ಭಾವ ಫಲ್ಗುಣ ವಿಪ್ರಶಿಶುವ ಪಾಲಿಪೆನೆಂಬ

ಭಾವದಿ ನುಡಿದಂತೆ ನಿನಗೇನು ಪೇಳಿಲ್ಲ 5


ನಿನ್ನಾ ಕುವರರು ಸುಭದ್ರೆಯ ಮದುವೆಯ

ಚೆನ್ನಾಗಿ ತಡೆದಂತೆ ತಡೆಯಲಿಲ್ಲವೊ ನಾನು6


ವಸುದೇವ ದೇವಕಿ ಮುಖ್ಯರಂತೆ ನಿನ್ನ ಮಾ-

ನುಷನೆಂದು ನಾನೇನು ತಿಳಿದುಕೊಂಡಿಲ್ಲ 7


ಮಲಗಿದ್ದ ಸಮಯದ ಕಂಡು ಬಲಿಯು ಬಂದು

ಮೌಲಿಯ ಕದ್ದಂತೆ ಕದ್ದುಕೊಂಡಿಲ್ಲ8


ರಾಜೇಶಹಯಮುಖ ಭಜಕರೊಳಗೆ ಮತ್ತೆ

ಋಜುಗಳಲ್ಲದೆ ನಿತ್ಯ ಭಕ್ತರಾರಿಹರು 9

***