Showing posts with label ಸಾಗಿ ಬಾರೋ ಲೇಸಾಗಿ ಬಾರೋ ಘನತ್ಯಾಗಿ ಬಾರೋ shyamasundara. Show all posts
Showing posts with label ಸಾಗಿ ಬಾರೋ ಲೇಸಾಗಿ ಬಾರೋ ಘನತ್ಯಾಗಿ ಬಾರೋ shyamasundara. Show all posts

Wednesday, 1 September 2021

ಸಾಗಿ ಬಾರೋ ಲೇಸಾಗಿ ಬಾರೋ ಘನತ್ಯಾಗಿ ಬಾರೋ ankita shyamasundara

 ..

ಸಾಗಿ ಬಾರೋ ಲೇಸಾಗಿ ಬಾರೋ ಘನತ್ಯಾಗಿ ಬಾರೋ

ಬಾಗಿ ನಮಿಪೆ ಜಗನ್ನಾಥಾರ್ಯ ರಥವೇರಿ ಪ


ನಂಬಿ ಭಜಿಪರಿಗೆ ಜಂಭಾರಿ ಕುಜದಂತೆ

ಹಂಬಲವನ್ನು ತುಂಬಿಕೊಂಡಿರುವಂಥ | ಗುರುಕರು

ಣಾಂಬುಧಿ ಸ್ತಂಭದಿ ಪೊರೆಮಟ್ಟು ಸಂಭ್ರಮದಿ 1


ಭಾಗವತರು ಮುಂಭಾಗದಲಿ | ಕುಣಿಯುತಲಿ

ರಾಗಾಲಾಪಗಳಿಂದ ಹರಿನಾಮ ಪಾಡುತಲಿ

ಕೂಗಿ ಮುಗಿದು ಕೈ ಕರೆಯುವರು | ಪಥ ಕಾಯುವರು 2


ಪೊಡವಿ ಸುರರ ಕೂಡಿ ಎಡಬಲದಿ ಸಡಗರದಿ

ಬಿಡದೆ ವೇದಂಗಳ ಪಠಿಸುತ ಭಕ್ತಿಯಲಿ

ಒಡೆಯ ನಿನ್ನಾಗಮನ ನೋಡುವರು | ಗತಿ ಬೇಡುವರು 3


ಪಾಡಿ ಪೊಗಳುವರ ಕಾಯುವ | ಮೂಢರನು

ಓಡಿಸುವಲ್ಲಿ ನಿನಗೀಡ್ಯಾರೋ ರೂಢಿಯೊಳು

ನೋಡಿ ದಯದಿಂದ ನೀ ನೋಡಿ ಗುರುರಾಯ 4


ಭೂಮಿ ವಿಬುಧರಿಗೆ ನೀ ಮಾಡಿದುಪಕಾರ

ನಾ ಮರೆಯಲಾರೆನು ಎಂದೆಂದು | ಗುರುರಾಯ

ನಾ ಮರೆಯ ಲಾರೆನು ಎಂದೆಂದು ಜಗದೊಳಗೆ

ಶಾಮಸುಂದರನ ಪ್ರಿಯದಾಸ | ರಥವೇರಿ 5

***