Showing posts with label ಪವಮಾನ ಪಾವನ ಚರಿತ ಪದ್ಮ jagannatha vittala. Show all posts
Showing posts with label ಪವಮಾನ ಪಾವನ ಚರಿತ ಪದ್ಮ jagannatha vittala. Show all posts

Saturday 14 December 2019

ಪವಮಾನ ಪಾವನ ಚರಿತ ಪದ್ಮ ankita jagannatha vittala

ಜಗನ್ನಾಥದಾಸರು
ಪವಮಾನ ಪಾವನ ಚರಿತ ಪದ್ಮ
ಭವನ ಪದಾರ್ಹನೆ ನಿರುತ ಅಹ ಪ

ಶ್ರವಣಾದಿ ಭಕುತಿ e್ಞÁನವಿತ್ತು ಸಲಹೊ ಮೂ
ರವತಾರಾತ್ಮಕ ತತ್ವ ದಿವಿಜನಿಯಾಮಕ ಅ.ಪ.

ಪ್ರಾಣೋಪಾನ ವ್ಯಾನೋದಾನ ಹೇ ಸ
ಮಾನ ರೂಪಕನೆ ವಿe್ಞÁನ ತತ್ವ
ಗೀರ್ವಾಣ ಅಹ
ಸೇನಾಧಿಪತಿ ನಿನ್ನ e್ಞÁನಸಾರದಲಿಪ್ಪ
ಮಾನವರನು ಕಾಯೋ ಮೌನಿ ಧ್ಯಾನಗಮ್ಯ 1

ನಾಗಕೂರ್ಮ ದೇವದತ್ತ ಕೃಕಳ
ಯೋಗಿವರಿಯ ಮುಕ್ತಾಮುಕ್ತ ಕ್ಲುಪ್ತ
ಭೋಗಗಳೀವ ಸುಶಕ್ತಾ ತಲೆ
ಬಾಗಿ ಬೇಡುವೆ ಸರ್ವೋದ್ರ್ರಿಕ್ತ ಅಹ
ಜಾಗುಮಾಡದೆ ನಿಜ
ಭಾಗವತರೊಳಿಡೊ ಮೈಗಣ್ಣಪದನಾಳ್ದ 2

ಮೂರುಕೋಟಿ ರೂಪಧರನೆ ಲೋಕ
ಧಾರಕ ಲಾವಣ್ಯಕರನೆ ಸರ್ವ
ಪ್ರೇರಕ ಭಾರತಿವರನೆ ತ್ರಿಪು
ರಾರಿಗೆ ವಜ್ರಪಂಜರನೆ ಆಹ
ನೀರಜ ಜಾಂಡದಿ ಮೂರೇಳು ಸಾವಿರ
ದಾರು ನೂರು ಜಪ ಬೇರೆ ಬೇರೆ ಮಾಳ್ಪ 3

ಆಖಣಾಶ್ಮ ಸಮಚರಣ ಪದ್ಮ
ಲೇಖರ ಮಸ್ತಕಾಭರಣ ಕಲ್ಪ
ಶಾಖೆಯಂತೆ ಅತಿಕರುಣಾದಿಂದ
ಈ ಖಂಡದೊಳು ಮಿಥ್ಯಾವರಣ ಆಹಾ
ನೀ ಖಂಡಿಸಿದಿ ದಂಡ ಮೇಖಲ ಭೂಷಣ
ಆಖುವಾಹನಪಿತ ಆಖಂಡಲರ್ಚಿತ 4

ಶ್ರೀವಲ್ಲಭಗೆ ಪ್ರತಿಬಿಂಬನಾಗಿ
ಜೀವವೇದ ಕಾಲಸ್ತಂಭಗತ
ಆವಾಗ ಹರಿರೂಪ ಕಾಂಬ ಶಕ್ತ
ನೀ ಒಬ್ಬನಹುದೋ ನಾನೆಂಬೆ ಆಹಾ
ವಿಭವ ಜಗ
ನಿತ್ಯ 5

ದಕ್ಷಿಣಾಕ್ಷಿಗತ ವತ್ಸಾ ರೂಪಿ
ದಕ್ಷನಹುದೋ ಪರಮೋಚ್ಚಾ ಚಾರು
ತ್ರ್ಯಕ್ಷಾದಿ ಸುರರೊಳಧ್ಯಕ್ಷಾ ಸರ್ವಾ
ಪೇಕ್ಷರಹಿತನೆ ಸ್ವೇಚ್ಛಾ ಆಹಾ
ಮೋಕ್ಷಾದಿ ದ್ವಾತ್ರಿಂಶ ಲಕ್ಷಣ ಪುರುಷ ನಿ
ರೀಕ್ಷಿಸಿ ಕರುಣದಿ ರಕ್ಷಿಸೋ ಎನ್ನನು 6

ಮೂಲೇಶನಂಘ್ರಿ ಸರೋಜ ಭೃಂಗ
ಏಳೇಳು ಲೋಕಾಧಿರಾಜಾ ಇಪ್ಪ
ತ್ತೇಳು ರೂಪನೆ ರವಿತೇಜಾ ಲೋಕ
ಪಾಲಕರಾಳ್ವ ಮಹೋಜಾ ಆಹಾ
ಕಾಳಿರಮಣ ನಿನ್ನ ಕಾಲಿಗೆರಗುವೆ ಕೃ
ಪಾಳು ಭಕ್ತಿ e್ಞÁನವಾಲಯ ಕರುಣಿಸು 7

ಅಧಿಭೂತ ಅಧ್ಯಾತ್ಮಗತನೇ ವಿಮಲ
ಅಧಿದೈವರೊಳು ಪ್ರವಿತತನೆ ಕಲಿ
ವದನದಿ ನಿಲಿಸೋ ಮಾರುತನೆ ಆಹಾ
ಬದರಿಕಾಶ್ರಮದೊಳು ಹದಿನಾರು ಸಾವಿರ
ಸನ್ನುತ 8

ಮಾತರಿಶ್ವ ಮಹಾಮಹಿಮ ಸರ್ವ
ಚೇತನ ಹೃದ್ಗತ ಹನುಮ ಭೀಮ
ಭೂತಳದೊಳು ಮಧ್ವ ನಾಮಾದಿಂದ
ಜಾತನಾಗಿ ಜಿತಕಾಮಾ ಆಹಾ
ಆ ತಿಪ್ಪಣ್ಣಾದಿ ವಿಖ್ಯಾತ ಮಾಯ್ಗಿಳ ಗೆದ್ದ
ಸೀತಾರಮಣ ಜಗನ್ನಾಥ ವಿಠ್ಠಲ ದೂತ 9
*******