RAO COLLECTIONS SONGS refer remember refresh render DEVARANAMA
ಪಂಢರಪುರ ನಿಲಯ ಪಾಂಡುರಂಗ ಕಾಯೋ ll ಪ ll
ಭಕ್ತನ ಮೊರೆ ಕೇಳಿ ಸ್ವಪ್ನದಿ ಅಂಕಿತ ನೀಡಿ
ಶಕ್ತನ ಮಾಡಿದ್ಯೋ ನಿನ್ನ ಸೇವೆಗೆ ll 1 ll
ನಿತ್ಯದಿ ಮಾಡುವೆ ಸಾವಿರ ತಪ್ಪನು
ಸತ್ಯಸಂಕಲ್ಪ ನೀ ಕ್ಷಮಿಸಿ ಸಲಹೋ ll 2 ll
ಚಂದ್ರಭಾಗಾ ತೀರವಾಸ ಶ್ರೀಹಯವದನವಿಟ್ಠಲ
ಚಂದ್ರವಂಶಕುಲಲಲಾಮ ನೀ ಬಿಡದೆ ಕಾಯೋ ll 3 ll
***