Showing posts with label ಕರುಣಿಸು ಜಯೇಶ ವಿಠಲ ವರ ಅಂಕಿತವಿದನು ಇತ್ತೆ vijaya ramachandra jayesha vittala stutih. Show all posts
Showing posts with label ಕರುಣಿಸು ಜಯೇಶ ವಿಠಲ ವರ ಅಂಕಿತವಿದನು ಇತ್ತೆ vijaya ramachandra jayesha vittala stutih. Show all posts

Saturday, 1 May 2021

ಕರುಣಿಸು ಜಯೇಶ ವಿಠಲ ವರ ಅಂಕಿತವಿದನು ಇತ್ತೆ ankita vijaya ramachandra jayesha vittala stutih

ಕರುಣಿಸು ಜಯೇಶ ವಿಠಲ | 

ವರ ಅಂಕಿತವಿದನು ಇತ್ತೆ || ಪ || 


ತರುಳ ನಿನ್ನವನೆಂದು | 

ಗುರುವಾತ ಸ್ಥಿತನಾಗಿ | ಭರದಿ ಪಾಲಿಸಿದೆ ಇವನ | 

ಹರಿ ನೀ ನಿದ್ದೆಡೆಗೆ ಕರೆಸಿ || ಅ. ಪ || 

 

ಇರಿಸು ವರ್ಣಾಶ್ರಮ ವರಧರ್ಮ ಕರ್ಮಗಳಲ್ಲಿ, 

ಮರೆಸಿ ಕಾಮ್ಯ ಕರ್ಮಗಳೆಲ್ಲವನ್ನು, 

ಸ್ಮರಿಸದಂತೆ ಮಾಡು ಪರಸತಿಯರೊಲಿಮೆ, 

ಮರೆಯದಂತಿರಲಿ ಪರತತ್ವವನ್ನು || 1 || 

 

ಅತಿಥಿ ಅಭ್ಯಾಗತರ ಪೂಜೆ ಸತಿ ಸುತ 

ಪರಿವಾರದಿ ಕೃತ ಕೃತ್ಯನಾಗಿ ಮಾಡಿಸಿ, 

ಪತಿತರಾ ಸಹವಾಸ ಹಿತವೆಂದರುಪದೇ, 

ಸದ್ಗತಿ ನೀವ ಮಾರ್ಗ ತಿಳಿಸಿ || 2 || 

 

ನಿರುತ ತತ್ವ ನಿಶ್ಚಯದಲ್ಲಿ ಜ್ಞಾನ, 

ಗುರುಹಿರಿಯರಲಿ ಭಕ್ತಿ, ದುರ್ವಿಷಯದಲಿ ವಿರಕ್ತಿನಿತ್ತು, 

ವರ ವಿಜಯ ರಾಮಚಂದ್ರ| 

ವಿಠಲ ಸುರರೊಡೆಯ ಒರೆದು ನಾಮಾಮೃತವ ನುಡಿಸೀ || 3 ||

****