ಕರುಣಿಸು ಜಯೇಶ ವಿಠಲ |
ವರ ಅಂಕಿತವಿದನು ಇತ್ತೆ || ಪ ||
ತರುಳ ನಿನ್ನವನೆಂದು |
ಗುರುವಾತ ಸ್ಥಿತನಾಗಿ | ಭರದಿ ಪಾಲಿಸಿದೆ ಇವನ |
ಹರಿ ನೀ ನಿದ್ದೆಡೆಗೆ ಕರೆಸಿ || ಅ. ಪ ||
ಇರಿಸು ವರ್ಣಾಶ್ರಮ ವರಧರ್ಮ ಕರ್ಮಗಳಲ್ಲಿ,
ಮರೆಸಿ ಕಾಮ್ಯ ಕರ್ಮಗಳೆಲ್ಲವನ್ನು,
ಸ್ಮರಿಸದಂತೆ ಮಾಡು ಪರಸತಿಯರೊಲಿಮೆ,
ಮರೆಯದಂತಿರಲಿ ಪರತತ್ವವನ್ನು || 1 ||
ಅತಿಥಿ ಅಭ್ಯಾಗತರ ಪೂಜೆ ಸತಿ ಸುತ
ಪರಿವಾರದಿ ಕೃತ ಕೃತ್ಯನಾಗಿ ಮಾಡಿಸಿ,
ಪತಿತರಾ ಸಹವಾಸ ಹಿತವೆಂದರುಪದೇ,
ಸದ್ಗತಿ ನೀವ ಮಾರ್ಗ ತಿಳಿಸಿ || 2 ||
ನಿರುತ ತತ್ವ ನಿಶ್ಚಯದಲ್ಲಿ ಜ್ಞಾನ,
ಗುರುಹಿರಿಯರಲಿ ಭಕ್ತಿ, ದುರ್ವಿಷಯದಲಿ ವಿರಕ್ತಿನಿತ್ತು,
ವರ ವಿಜಯ ರಾಮಚಂದ್ರ|
ವಿಠಲ ಸುರರೊಡೆಯ ಒರೆದು ನಾಮಾಮೃತವ ನುಡಿಸೀ || 3 ||
****
No comments:
Post a Comment