Showing posts with label ರತ್ನವ ದೊರಕಿಸಿರೊ ಬಹಳ ಪ್ರಯತ್ನದಿಂದ ರಕ್ಷಿಸಿರೊ gadugina veeranarayana. Show all posts
Showing posts with label ರತ್ನವ ದೊರಕಿಸಿರೊ ಬಹಳ ಪ್ರಯತ್ನದಿಂದ ರಕ್ಷಿಸಿರೊ gadugina veeranarayana. Show all posts

Wednesday, 1 September 2021

ರತ್ನವ ದೊರಕಿಸಿರೊ ಬಹಳ ಪ್ರಯತ್ನದಿಂದ ರಕ್ಷಿಸಿರೊ ankita gadugina veeranarayana

 ..

kruti by ವೀರನಾರಾಯಣ Veeranarayana 


ರತ್ನವ ದೊರಕಿಸಿರೊ ಬಹಳ ಪ್ರಯತ್ನದಿಂದ ರಕ್ಷಿಸಿರೊ ಪ


ಕತ್ತಲೆ ತುಂಬಿದ ಕತ್ತಲೆಗೂಡೊಳುಸುತ್ತಲು ಬೆಳಗಿಸಿ ಝಗಝಗಝಗಿಸುವ ಅ.ಪ.


ಜ್ಞಾನದ ಖಣಿಯಿಂದಲಗೆದು ಮನಸಿನಹೀನ ಕಸವನೆಲ್ಲ ತೆಗೆದುಧ್ಯಾನ ಕುಂದಣದಿಂದ ಘಟ್ಯಾಗಿ ಬಿಗಿದುಮಾನಸ ಭಾಂಢಾರದೊಳಗಿಡಲು ಬಗೆದು 1


ಬೆಲೆ ಇದಕೆ ಒಂದೇ ಲಕ್ಷ ಕೊಟ್ಟರೆಸುಲಭವೊ ನಿಮಗೆ ಪರೋಕ್ಷಒಲಿದೊಗೆವುದು ತಾನು ಕಿರಣಕಟಾಕ್ಷನಿಲುವಿಗೆ ಬೇಕಾದ ಅಳತೆಗೆ ಬರುವ2


ತೇಜದಿ ಕೋಟಿಸೂರ್ಯರ ಮಿಕ್ಕುವ ನಿತ್ಯಭಾಜಕ ಜನರಘರಾಶಿಯ ಮುಕ್ಕುವಓಜದೆ ಮನಕಾನಂದವನಿಕ್ಕುವಗದುಗಿನ ವೀರ ನಾರಾಯಣನೆಂಬುವ 3

***