Showing posts with label ಆರಿದ್ದರೇನಯ್ಯ ನೀನಲ್ಲದೆನಗಿಲ್ಲಕಾರುಣ್ಯ purandara vittala. Show all posts
Showing posts with label ಆರಿದ್ದರೇನಯ್ಯ ನೀನಲ್ಲದೆನಗಿಲ್ಲಕಾರುಣ್ಯ purandara vittala. Show all posts

Tuesday, 3 December 2019

ಆರಿದ್ದರೇನಯ್ಯ ನೀನಲ್ಲದೆನಗಿಲ್ಲಕಾರುಣ್ಯ purandara vittala

ಪುರಂದರದಾಸರು
ಆರಿದ್ದರೇನಯ್ಯ  ನೀನಿಲ್ಲದೆ ||ಪ||
ಕಾರುಣ್ಯನಿಧಿ ಹರಿಯೆ ಕೈಯ ಬಿಡಬೇಡ ||ಅ||

ದುರುಳ ಕೌರವನಂದು ದ್ರುಪದಜೆಯ ಸೀರೆಯನು
ಕರಗಳಿಂ ಸೆಳೆಯುತಿರೆ ಪತಿಗಳೆಲ್ಲ
ಗರ ಹೊಡೆದಂತಿರ್ದರಲ್ಲದೆ ನರಹರಿಯೆ
ಕರುಣಿ ನೀನಲ್ಲದಿನ್ನಾರು ಕಾಯ್ದವರು     ||೧||

ಅಂದು ನೆಗಳಿನ ಬಾಧೆಯಿಂದ ಗಜ ಕೂಗಲು
ತಂದೆ ನೀ ವೈಕುಂಠದಿಂದ ಬಂದು
ಇಂದಿರೇಶನೆ ಚಕ್ರದಿಂದ ನಕ್ರನ ಬಾಯ
ಸಂಧಿಯನು ಸೀಳಿ ಕೃಪೆಯಿಂದ ಸಲಹಿದೆಯೊ ||೨||

ಅಜಮಿಳನು ಕುಲಗೆಡಲು ಕಾಲದೂತರು ಬರಲು
ನಿಜಸುತನ ಕರೆಯೆ ನೀನತಿವೇಗದಿ
ತ್ರಿಜಗದೊಡೆಯನೆ ಸಿರಿ ಪುರಂದರವಿಠಲ

ನಿಜದೂತರನು ಕಳುಹಿ ಕಾಯ್ದೆ ಶ್ರೀಹರಿಯೆ     ||
********

ಆರಿದ್ದರೇನಯ್ಯ ನೀನಲ್ಲದೆನಗಿಲ್ಲಕಾರುಣ್ಯ ನಿಧಿ ಹರಿಯೆ ಕೈಯ ಬೆಡಬೇಡ ಪ

ದುರುಳಕೌರವನಂದು ದ್ರುಪದಜೆಯ ಸೀರೆಯನುಕರದಿಂದ ಸೆಳೆಯುತಿರೆ ಪತಿಗಳೆಲ್ಲ ||ಗರಹೊಯ್ದರಂತಿದ್ದರಲ್ಲದೇ ನರಹರಿಯೆಕರುಣದಿಂ ನೀನಲ್ಲದಾರು ಕಾಯ್ದವರು 1

ಅಂದು ನೆಗಳಿನ ಬಾಧೆಯಿಂದ ಗಜರಾಜನನುತಂದೆ ನೀ ವೈಕುಂಠದಿಂದ ಬಂದು ||ಇಂದಿರೇಶನೆ ಚಕ್ರದಿಂದ ನೆಗಳಿನ ಬಾಯಸಂಧಿಯನು ಸೀಳಿ ಪೊರೆದೆಯೆಲೊ ನರಹರಿಯೇ 2

ಅಜಮಿಳನು ಕುಲಗೆಟ್ಟು ಕಾಲದೂತರು ಬರಲುನಿಜಸುತನ ಕರೆಯಲವನತಿ ವೇಗದಿ ||ತ್ರಿಜಗದೊಡೆಯನೆಪುರಂದರವಿಠಲ ಕರುಣದಲಿನಿಜದೂತರನು ಕಳುಹಿ ಕಾಯ್ದೆ ಗಡ ಹರಿಯೇ 3
*******