Showing posts with label ತಾಳು ತಾಳು ತಾಳಬೇಕೆನ್ನುವಿರೋ ಗುರುವೇ ankita raghavendra. Show all posts
Showing posts with label ತಾಳು ತಾಳು ತಾಳಬೇಕೆನ್ನುವಿರೋ ಗುರುವೇ ankita raghavendra. Show all posts

Thursday, 5 August 2021

ತಾಳು ತಾಳು ತಾಳಬೇಕೆನ್ನುವಿರೋ ಗುರುವೇ ankita raghavendra

 ..

kruti by radhabai

ತಾಳು - ತಾಳು - ತಾಳಬೇಕೆನ್ನುವಿರೋ ಗುರುವೇ ಪ


ಇನ್ನೆಷ್ಟುದಿನ ತಾಳಬೇಕೋ ತಿಳಿಯಾದೋ ಅ.ಪ.


ಆಶ್ರಿತಜನ ರಕ್ಷಕನೆಂದೂ ನಂಬಿದೇನೊ ಪ್ರಭುವೇ |

ಎಂದೆಂದಿಗೂ ಬಿಡೆ ನಿಮ್ಮಯ ಪಾದ ಶ್ರೀ ರಾಘವೇಂದ್ರ ಪ್ರಭವೇ 1

ತನುವಿನೊಳಗೆ ಬಲವು ಇಲ್ಲಾ ಮನದೊಳಗೆ ಧೃಡಾವಿಲ್ಲ

ಇನ್ನಾದರು ದಯಮಾಡಿ ಸಲಹಯ್ಯ ಪ್ರಭವೇ2

ದುರಿತ ರಾಶಿಗಳ ನಾಶಗೊಳಿಸೆ ನಿನ್ಹೊರತ್ಯಾರಿಲ್ಲ ಪ್ರಭುವೇ

ತ್ವರಿತದಿ ಕರುಣ ಕಟಾಕ್ಷದಿ ನೋಡು ಶ್ರೀ ರಾಘವೇಂದ್ರ ಗುರುವೇ 3

ಈ ಸಂಸಾರ ಶರಧಿಯೋಳ್ ಮುಳುಗಿ ಬಳಲಿದೆ ಗುರುವೇ

ಘಾಸಿಗೊಂಡಿಹೆ ಕೃಪೆಮಾಡೈ ಶ್ರೀ ರಾಘವೇಂದ್ರ ಗುರುವೇ 4

ಈ ವಿಧ ಬವಣೆಯ ಪಡಲಾರೆನೋನಾ ಕರುಣಿಸೈ ಪ್ರಭುವೇ

ತಡೆಮಾಡದೆ ಕಡೆಹಾಯಿಸೋ ಶ್ರೀ ರಾಘವೇಂದ್ರ ಪ್ರಭವೇ 5

***